ಭಾನುವಾರ, ಆಗಸ್ಟ್ 27, 2023

ಕಕರಸಾ ನಿಗಮ; ಅಪಘಾತ ಪರಿಹಾರ ನಿಧಿ ಟ್ರಸ್ಟ್‍ನಿಂದ ಬಜ್ಜಮ್ಮ ಅವರಿಗೆ ₹2.75ಲಕ್ಷ ಪರಿಹಾರ ಚೆಕ್ ವಿತರಣೆ

ಬಳ್ಳಾರಿ,ಆ.26(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ-1ನೇ ಘಟಕದ ವಾಹನ ಸಂಖ್ಯೆ: ಕೆಎ 34 ಎಫ್ 1145 ವಾಹನವು ಮಾ.04ರಂದು ಸಿಂಧುವಾಳ ಗ್ರಾಮದಲ್ಲಿ ಮಾರಣಾಂತಿಕ ಅಪಘಾತವಾಗಿದ್ದು, ಅಪಘಾತದಲ್ಲಿ ವಾಹನ ಚಾಲಕ ಹೊನ್ನುರಸ್ವಾಮಿ ಮೃತಪಟ್ಟಿರುತ್ತಾರೆ. ಮೃತನ ಅವಲಂಬಿತರಾದ ಬಜ್ಜಮ್ಮ ಇವರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಅಪಘಾತ ಪರಿಹಾರ ನಿಧಿ ಟ್ರಸ್ಟ್‍ನಿಂದ ರೂ.2,75,000 ಚೆಕ್ ಸಂಖ್ಯೆ: 621559ನ್ನು ಶನಿವಾರ ಹಸ್ತಾಂತರಿಸಲಾಯಿತು ಎಂದು ಕಕರಸಾನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ