ಮಂಗಳವಾರ, ಆಗಸ್ಟ್ 22, 2023
ವ್ಯಕ್ತಿ ನಾಪತ್ತೆ; ಪತ್ತೆಗೆ ಮನವಿ
ಬಳ್ಳಾರಿ,ಆ.22(ಕರ್ನಾಟಕ ವಾರ್ತೆ):
ಕುರುಗೋಡು ತಾಲೂಕಿನ ಬೈಲೂರು ಗ್ರಾಮದ ನಿವಾಸಿ ಸಣ್ಣಮಲ್ಲಪ್ಪ ಎನ್ನುವ 46 ವರ್ಷದ ವ್ಯಕ್ತಿಯು 2022 ಡಿಸೆಂಬರ್ 08ರಂದು ಮನೆಯಿಂದ ಕಾಣೆಯಾಗಿದ್ದು, ಕುರುಗೋಡು ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ 5.4 ಅಡಿ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಕೂದಲು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಬಲಗೈ ಮೊಣಕೈ ಕೆಳಗೆ ಆಂಜಿನೇಯ ಮತ್ತು ಈಶ್ವರನ ಅಚ್ಚೆ ಗುರುತು ಹಾಕಿಸಿಕೊಂಡಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹೆರಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್‍ಪಿ ಅವರ ದೂ.08392-258400, 08392-258300, ತೋರಣಗಲ್ಲು ಉಪವಿಭಾಗ ಡಿಎಸ್‍ಪಿ ಅವರ ಮೊ.9480803010, ಕುರುಗೋಡು ಸಿಪಿಐ ಮೊ.9480803039, ಠಾಣೆಯ ಪಿಎಸ್‍ಐ ದೂ.08393-263433 ಹಾಗೂ ಮೊ.9480803051 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ