ಸೋಮವಾರ, ಆಗಸ್ಟ್ 21, 2023
ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಆ.21(ಕರ್ನಾಟಕ ವಾರ್ತೆ):
ನಗರದ ಎಪಿಎಂಸಿ ವೃತ್ತ ಹತ್ತಿರದ ಈದ್ಗಾಗೆ ಹೋಗುವ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗೆ ಸುಮಾರು 70 ವರ್ಷದ ಅಪರಿಷಿತ ವೃದ್ಧನು ಆ.19 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಮೃತನ ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ ಹೊಂದಿದ್ದು, ತಲೆಯಲ್ಲಿ ಬಿಳಿ ಕೂದಲು ಮತ್ತು ಉದ್ದನೇಯ ಬಿಳಿ ಗಡ್ಡ ಮತ್ತು ಮೀಸೆ ಹೊಂದಿರುತ್ತಾನೆ.
ಮೃತನು ಮಾಸಿದ ಕಪ್ಪು ಬಣ್ಣದ ಬಿಳಿ ಚುಕ್ಕೆಯಿರುವ ತುಂಬು ತೋಳಿನ ಅಂಗಿ ಮತ್ತು ತಿಳಿ ಬಿಳಿ ಬಣ್ಣದ ಡ್ರಾಯರ್ ತೊಟ್ಟಿರುತ್ತಾನೆ.
ಅಪರಿಚಿತ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಪಿಎಂಸಿ ಯಾರ್ಡ್ ಪೊಲೀಸ್‍ಠಾಣೆಯ ದೂ.08392-250033, ಮೊ.9480803096 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ