ಬುಧವಾರ, ಆಗಸ್ಟ್ 23, 2023

ಸಂಡೂರು ಪಟ್ಟಣದಲ್ಲಿ ವಿವಿಧೆಡೆ ದಾಳಿ: ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ

ಬಳ್ಳಾರಿ,ಆ.23(ಕರ್ನಾಟಕ ವಾರ್ತೆ): ಸಂಡೂರು ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಿಂದ ಕೂಡ್ಲಿಗಿ ರಸ್ತೆ, ವಿಜಯ ಸರ್ಕಲ್ ಮತ್ತು ಬಳ್ಳಾರಿ ರಸ್ತೆ ಮಂತಾದ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ ಇತ್ಯಾದಿ ಉದ್ದಿಮೆಗಳ ಮೇಲೆ ದಾಳಿ ನಡೆಸಿ ಬುಧವಾರ ಇಬ್ಬರು ಕಿಶೋರ ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ, ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚಿಸಿ ದಾಳಿ ನಡೆಸಿದ್ದು, ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಸಂಬಂಧಿಸಿದ ಮಾಲೀಕರ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರ ಅನಿಲ್ ಕುಮಾರ್, ಕಂದಾಯ ನಿರೀಕ್ಷಕ ಡಿ.ವಿರೇಶ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ, ಬಚಪನ್ ಬಚವೋ ಅಂದೋಲನದ ರಾಜ್ಯ ಸಂಯೋಜಕ ವರ್ಗಿಸ್, ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಹೊನ್ನೂರಪ್ಪ, ಪರಿಸರ ಅಭಿಯಂತರ ಅನ್ನಪೂರ್ಣ, ಆರೋಗ್ಯ ನಿರೀಕ್ಷಕಿ ಶಿವರಂಜನಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಬೋಜರಾಜ್ ಹಾಜರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ