ಬುಧವಾರ, ಆಗಸ್ಟ್ 30, 2023
ಅಂಚೆ ಇಲಾಖೆಯಿಂದ ರಾಷ್ಟಮಟ್ಟದ ಪತ್ರಲೇಖನ ಸ್ಪರ್ಧೆ
ಬಳ್ಳಾರಿ,ಆ.30(ಕರ್ನಾಟಕ ವಾರ್ತೆ):
ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಪತ್ರ ಲೇಖನ ಅಭಿರುಚಿಯನ್ನು, ಬರವಣಿಗೆ ಕೌಶಲ್ಯವನ್ನು ಹಾಗೂ ದೇಶಪ್ರೇಮವನ್ನು ಜಾಗೃತಿಗೊಳಿಸಲು ದೇಶ್ಯಾದ್ಯಂತ ರಾಷ್ಟಮಟ್ಟದ ಮುಕ್ತ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕವರ ಕಚೇರಿಯ ಅಂಚೆ ಅಧೀಕ್ಷಕ ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ.
ನವಭಾರತ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ (Digital India for New India) ಎಂಬ ವಿಷಯದ ಮೇಲೆ ಎ4 ಅಳತೆಯ ಹಾಳೆಯಲ್ಲಿ 1000 ಪದಗಳ ಮಿತಿಯೊಳಗೆ ಬರೆದು ಎನ್ವೊಲಾಪ್ (ಇಓಗಿಇಐಔPಇ) ಅಥವಾ ಐಎಲ್‍ಸಿ (ಇನ್ ಲ್ಯಾಂಡ್) ಅಂತರ್ದೇಶೀಯ ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆದು, ಸ್ಪರ್ಧಿಗಳು ಅಂಚೆ ಅಧಿಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ 583102 ಇವರಿಗೆ ತಲುಪುವಂತೆ ಅಂಚೆ ಮೂಲಕ ಕಳಿಹಿಸಿಕೊಡಬಹುದು.
18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗಗಳಿದ್ದು ರಾಷ್ಟಮಟ್ಟದ ಪ್ರತಿವಿಭಾಗಕ್ಕೆ ಅತ್ತ್ಯುತ್ತಮ ಪತ್ರಕ್ಕೆ ರೂ.50 ಸಾವಿರ ಹಾಗೂ ರಾಜ್ಯಮಟ್ಟದ ಅತ್ತ್ಯುತ್ತಮ ಪತ್ರಕ್ಕೆ ರೂ.25 ಸಾವಿರ ಬಹುಮಾನ ಹಾಗೂ ದ್ವಿತೀಯ, ತೃತೀಯ ಬಹುಮಾನಗಳು ನೀಡಲಾಗುತ್ತದೆ.
ಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದಾಗಿದ್ದು, ಪತ್ರಗಳನ್ನು ಅಕ್ಟೋಬರ್ 31 ಒಳಗೆ ತಲುಪಿಸಬೇಕು. ಮುದ್ರಿತ ಪತ್ರಗಳನ್ನು ಸ್ವೀಕರಿಸುವುದಿಲ್ಲ.
ಬಳ್ಳಾರಿ ವಿಭಾಗದ ವ್ಯಾಪ್ತಿಯ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಹಾಗೂ ದೂ.08392-266037 ಅಥವಾ ನಾಗರಾಜ್ ರಾವ್ ಮೊ.8660295657 ಗೆ ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕರು ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ