ಬುಧವಾರ, ಆಗಸ್ಟ್ 23, 2023

ಅನಾಮಧೇಯ ಮೃತ ಮಹಿಳೆ ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಆ.23(ಕರ್ನಾಟಕ ವಾರ್ತೆ): ನಗರದ ರೈಲ್ವೇ ನಿಲ್ದಾಣದಲ್ಲಿ ಸುಮಾರು 60 ವರ್ಷದ ಅನಾಮಧೇಯ ಮಹಿಳೆಯು ಯಾವುದೋ ಖಾಯಿಲೆಯಿಂದ ಬಳಲಿ, ಸ್ವಾಭಾವಿಕವಾಗಿ ಆ.23 ರಂದು ಮೃತಪಟ್ಟಿದ್ದು, ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ರೈಲ್ವೇ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಎತ್ತರ ಸುಮಾರು 5.4 ಅಡಿ, ಸಾಧಾರಣ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಅಗಲವಾದ ಹಣೆ, ನೆಟ್ಟನೆಯ ಮೂಗು, ತಲೆಯಲ್ಲಿ ಸುಮಾರು 15 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಹೊಂದಿರುತ್ತಾಳೆ. ಎಡಗೈ ಮೂಗಿನಲ್ಲಿ ಒಂದು ರೋಲ್ಡ್ ಗೋಲ್ಡ್ ಬಣ್ಣದ ಸಣ್ಣ ಮೂಗುತಿ, ಕೊರಳಲ್ಲಿ ಗಾಜಿನ ಬಿಳಿ ಮಣಿ ಸರ, ಎರಡು ಕೈಗಳ ಮೈಗೈಯಲ್ಲಿ ನಾಲ್ಕು ತಾಮ್ರದ ಬಳೆಗಳು ಹಾಗೂ ಎಡಗೈ ಮುಂಗೈನಲ್ಲಿ ಮೂರು ಗಾಜಿನ ಕೆಂಪು ಬಳೆಗಳು ಮತ್ತು ಬಲಗೈ ಉಂಗುರು ಬೆರಳಿಗೆ ಒಂದು ಸ್ಟೀಲ್ ಉಂಗುರ ಧರಿಸಿರುತ್ತಾಳೆ. ಮೃತಳ ಮೈ ಮೇಲಿನ ಬಟ್ಟೆಗಳು: ಹಸಿರು ಮತ್ತು ನೀಲಿ ಬಣ್ಣದ ಡಿಜೈನ್‍ವುಳ್ಳ ಸೀರೆ, ಗುಲಾಬಿ ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ನೀಲಿ ಬಣ್ಣದ ಗೆರೆಗಳುಳ್ಳ ಲುಂಗಿ ಹಾಗೂ ಪ್ರಯಾಣಿಕರು ಕೂಡುವ ಕಟ್ಟೆಯ ಮೇಲೆ ಹಳದಿ ಬಣ್ಣದ ಸೀರೆ, ಬಿಳಿ ಮತ್ತು ಗುಲಾಬಿ ಬಣ್ಣದ ಬೆಡ್‍ಶೀಟ್ ಇರುತ್ತದೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ