ಬುಧವಾರ, ಆಗಸ್ಟ್ 16, 2023

ನ್ಯೂ ಇಂಡಿಯಾ-ಕ್ಲೀನ್ ಇಂಡಿಯಾ; ಸೆಲ್ಫಿಬೂತ್

ಬಳ್ಳಾರಿ,ಆ.16(ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ನ್ಯೂ ಇಂಡಿಯಾ-ಕ್ಲೀನ್ ಇಂಡಿಯಾ ಕುರಿತು ಸೆಲ್ಫಿಬೂತ್ ನ್ನು ಸೋಮವಾರ ಆಯೋಜನೆ ಮಾಡಲಾಗಿತ್ತು. ವಿಭಾಗೀಯ ವೈದ್ಯಾಧಿಕಾರಿ ಡಾ.ವಿಶ್ವನಾಥ ಅವರು ಸೆಲ್ಫಿಬೂತ್‍ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಆಶಯದಂತೆ ಸ್ವಚ್ಛಭಾರತದ ಕನಸಿನಂತೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಲು ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು. ಸಾರ್ವಜನಿಕರು ಸೆಲ್ಫಿ ತೆಗೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುವಂತೆ ಮಾನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್ ನಾಗೇಶ್ ಬಾಬು ಶರ್ಮಾ ಹಾಗೂ ಇತರರು ಹಾಜರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ