ಸೋಮವಾರ, ಆಗಸ್ಟ್ 7, 2023

ವ್ಯಕ್ತಿ ಕಾಣೆ

ಬಳ್ಳಾರಿ,ಆ.07(ಕರ್ನಾಟಕ ವಾರ್ತೆ): ನಗರದ ಯಲ್ಲಮ್ಮ ಗುಡಿ ಹತ್ತಿರದ 32ನೇ ವಾರ್ಡ್‍ನ ಬಂಡಿಹಟ್ಟಿ ನಗರ ನಿವಾಸಿಯಾದ ನೇಮಕಲ್ಲಪ್ಪ ಎನ್ನುವ 42 ವರ್ಷದ ವ್ಯಕ್ತಿಯು ಆ.06 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸುಮಾರು 5.5 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ದೃಢವಾದ ಮೈ ಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗೋಪಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಪಿಂಕ್ ಬಣ್ಣದ ಪಂಚೆ ಧರಿಸಿರುತ್ತಾನೆ. ಕಾಣೆಯಾಗಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ದೂ.08392-276461, ಗ್ರಾಮೀಣ ಪೆÇಲೀಸ್ ಠಾಣೆಯ ಪಿ.ಐ ಮೊ.9480803049 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ