ಬುಧವಾರ, ಆಗಸ್ಟ್ 9, 2023
ಕ್ಷಯರೋಗ ನಿರ್ಮೂಲನೆ ಕುರಿತ ತರಬೇತಿ ಕಾರ್ಯಾಗಾರ, ಕ್ಷಯರೋಗ ಗುಣಪಡಿಸಬಹುದಾದ ಖಾಯಿಲೆ: ಡಾ.ವಿ.ಇಂದ್ರಾಣಿ
ಬಳ್ಳಾರಿ,ಆ.09(ಕರ್ನಾಟಕ ವಾರ್ತೆ):
ಕ್ಷಯರೋಗವು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಜಾಗೃತರಾಗಿ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಘಟಕ ಇವರ ಸಹಯೋಗದಲ್ಲಿ ನಗರದ ತಾರಾನಾಥ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಮಂಥನಹಾಲ್‍ನಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕ್ಷಯರೋಗವು ‘ಮೈಕೋ ಬ್ಯಾಕ್ಟೋರಿಯಂ ಟ್ಯೂಬರ್ ಕ್ಲೋಸೆಸ್ ಬ್ಯಾಸಿಲ್ವೆ ಎಂಬ ರೋಗಾಣುಗಳಿಂದ ಹರಡುತ್ತದೆ. ಸರಿಯಾದ ಔಷಧಿ, ಸರಿಯಾದ ಪ್ರಮಾಣದಲ್ಲಿ, ಸೂಕ್ತ ಕಾಲಾವಧಿಯವರೆಗೆ ತೆಗೆದುಕೊಂಡಲ್ಲಿ ಸಂಪೂರ್ಣವಾಗಿ ಟಿಬಿಯನ್ನು ಗುಣಪಡಿಸಬಹುದಾದ ಖಾಯಿಲೆಯಾಗಿದೆ ಎಂದು ತಿಳಿಸಿದರು.
ಕ್ಷಯರೋಗವು ಒಬ್ಬರಿಂದ ಇನ್ನೊಬ್ಬರಿಗೆ ಕೆಮ್ಮುವುದರ ಮೂಲಕ ಗಾಳಿಯಿಂದ ಹರಡುತ್ತದೆ. ನಿರಂತರವಾಗಿರುವ ಹಾಗೂ ತುಂಬ ದಿನಗಳಾದರೂ ವಾಸಿಯಾಗದ ಕೆಮ್ಮು, ಸಂಜೆ ವೇಳೆ ಜ್ವರ, ಬೆವರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು ಇವೆಲ್ಲವುಗಳು ಟಿಬಿಯ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಅವರು ತಿಳಿಸಿದರು.
ಟಿಬಿ ರೋಗದ ಪತ್ತೆಗೆ ಕಫ ಪರೀಕ್ಷೆ ಅಗತ್ಯವಾಗಿದ್ದು, ಎರಡು ಕಫದ ಮಾದರಿ ಒಳಗೊಂಡಿರುತ್ತದೆ. ಇಪಿಟಿಬಿ ಎಕ್ಸಾಪಲ್ಮನರಿ (ಶ್ವಾಸಕೋಶೇತರ) ದೇಹದ ಇತರ ಭಾಗವನ್ನು ಬಾಧಿಸಿದಾಗ ಟಿಬಿ ಇಪ್ಪಸದ (ಶ್ವಾಸಕೋಶ್ವದ) ಹೊರಗಿನ ಕ್ಷಯ (ಇPಖಿಃ) ಎನ್ನುತ್ತಾರೆ. ಅದು ಕೂದಲು ಮತ್ತು ಉಗುರುಗಳ ಹೊರತಾಗಿ ದೇಹದ ಯಾವುದೇ ಭಾಗವನ್ನು ಬಾಧಿಸಬಹುದು ಎಂದು ಅವರು ವಿವರಿಸಿದರು.
ಟಿಬಿ ಚಿಕಿತ್ಸೆಯ ಬಗ್ಗೆ ವೈದ್ಯರು ಹೇಳುವಂತೆ ಪ್ರತಿದಿನವೂ ಔಷಧಿ ತೆಗೆದುಕೊಳ್ಳಬೇಕು. ಸರಿಯಾದ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಸೂಕ್ತ ಅವಧಿಗೆ ತೆಗೆದುಕೊಂಡಲ್ಲಿ ಕನಿಷ್ಟ 6-8 ತಿಂಗಳಲ್ಲಿ ರೋಗವಾಸಿಯಾಗಬಲ್ಲದು ಎಂದು ಹೇಳಿದರು.
*ಔಷಧಿಗಳನ್ನು ನುಂಗುವುದು ಹೇಗೆ:* ಎಲ್ಲಾ ಟಿಬಿ ಔಷಧಿಗಳನ್ನು ಪ್ರತಿದಿನ ಒಂದೇ ಕಾಲಕ್ಕೆ ಒಟ್ಟಿಗೆ ತೆಗೆದುಕೊಳ್ಳಬೇಕು. ಔಷಧಿ ತೆಗೆದುಕೊಳ್ಳುವುದು ಕಷ್ಟವಾದಲ್ಲಿ, ಸ್ವಲ್ಪ ಆಹಾರ ತೆಗೆದುಕೊಂಡ ನಂತರ ಅಥವಾ ಆಹಾರದ ನಂತರ ಔಷಧಿಗಳನ್ನು ತೆಗೆದುಕೊಳ್ಳಬಹುದು.
*ಟಿಬಿ ಚಿಕಿತ್ಸೆಯಿಂದಾಗುವ ಪರಿಣಾಮಗಳು:* ಟಿಬಿ ಔಷಧಿಗಳು ಟಿಬಿ ಬ್ಯಾಸಲೆಗಳನ್ನು ಕೊಲ್ಲುತ್ತವೆ ಅಥವಾ ಬೆಳೆಯಲು ಬಿಡುವುದಿಲ್ಲ. ಚಿಕಿತ್ಸೆಯಿಂದಾಗಿ ಟಿಬಿ ಇರುವ ವ್ಯಕ್ತಿ ಉತ್ತಮಗೊಳ್ಳುತ್ತಾನೆ, ದೇಹ ಸುಧಾರಿಸುತ್ತದೆ. ತೂಕ ಹೆಚ್ಚುತ್ತದೆ, ಕೆಲಸ ಮಾಡಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿನ ಮಕ್ಕಳು ಮತ್ತಿತರರಿಗೆ ಹಾಗೂ ಸುತ್ತಮುತ್ತಲಿನವರಿಗೆ ಹರಡುವುದು ನಿಲ್ಲುತ್ತದೆ. ನಿಯಮಬದ್ಧವಿಲ್ಲದ ಚಿಕಿತ್ಸೆ ಮಾಡಿದರೆ ರೋಗಾಣುಗಳು ಔಷಧಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ.
*ಕೆಮ್ಮುವಾಗ ವಹಿಸಬೇಕಾದ ಕಾಳಜಿ:* ಕರವಸ್ತ್ರದಿಂದ ಬಾಯಿ ಮೂಗನ್ನು ಮುಚ್ಚಿಕೊಳ್ಳಬೇಕು. ಕರವಸ್ತ್ರ ಇಲ್ಲದಿದ್ದಲ್ಲಿ ಮೋಣಕೈ ಬಳಸಿ, ಅಂಗೈ ಬೇಡ, ಪದೇ ಪದೇ ಕೆಮ್ಮು ಇದ್ದಲ್ಲಿ ಮಾಸ್ಕ್ ಬಳಸಿ ಆಗಾಗ ಕೈ ತೊಳೆಯಬೇಕು. ಸಾಬೂನು ಬಳಸಿದರೆ ಉತ್ತಮ ಮತ್ತು ಎಲ್ಲೆಂದರಲ್ಲಿ ಕಫ ಉಗುಳಬಾರದು.
ಟಿಬಿ ರೋಗಿಗಳು ಪೌಷ್ಟಿಕವಾದ ಮತ್ತು ಪೆÇ್ರೀಟಿನ್‍ಯುಕ್ತ ಆಹಾರವನ್ನು ಸೇವಿಸಬೇಕು. ಟಿಬಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೂ ಪೌಷ್ಠಿಕ ಆಹಾರ ಸೇವನೆಗೆ ಸಹಾಯವಾಗಲು ಚಿಕಿತ್ಸೆ ಅವಧಿಯಲ್ಲಿ ಪ್ರತಿ ತಿಂಗಳೂ ಸರ್ಕಾರದಿಂದ ರೂ.500 ಸಹಾಯಧನ ಕೊಡಲಾಗುವುದು ಎಂದು ತಿಳಿಸಿದರು.
ತಂಬಾಕು ಸೇವನೆ, ಮದ್ಯಪಾನ ಮತ್ತು ಟಿಬಿ ರೋಗಾಣುಗಳಿಂದಾಗಿ ಶ್ವಾಸಕೋಶಗಳು ಈಗಾಗಲೇ ದುರ್ಬಲವಾಗಿರುತ್ತವೆ. ಟಿಬಿ ರೋಗ ಇರುವವರಿಗೆ, ತಂಬಾಕು ಸೇವನೆ ಹಾನಿಕರ, ಟಿಬಿಗೆ ಔಷಧಿಗಳನ್ನು ತೆಗೆದುಕೊಳ್ಳುವಾಗ ಮತ್ತು ಚಿಕಿತ್ಸೆ ಪೂರ್ಣವಾದ ಬಳಿಕವೂ ಸಹ ಮದ್ಯಪಾನ ಮಾಡದಿರುವುದು ಒಳ್ಳೆಯದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ತಾರಾನಾಥ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸೈಯದ್ ಅತ್ತೆರ್ ಫಾತಿಮಾ, ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ರಾಜಶೇಖರ್ ಗಾಣಿಗೇರ, ಸ್ಥಾಯಿ ವೈದ್ಯಾಧಿಕಾರಿ ಡಾ.ರವಿ.ಆರ್ ಚವ್ಹಾಣ್, ಸಂಯೋಜಕ ಉದಯಕುಮಾರ್, ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ದೊಡ್ಡಬಸಯ್ಯ ಕೆಂಡದ ಮಠ, ಡಾ.ರಾಜೇಶ್ ಸೂಗೂರು, ಡಾ.ಸಂಪತ್ ಕುಮಾರ್ ಬೆಲ್ಲಂ, ಡಾ.ತಮೀಮ್ ಅನ್ಸಾರಿ, ದಾದಿ ಅಧೀಕ್ಷಕ ಮುಗಪ್ಪ ಸೇರಿದಂತೆ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಪ್ರಯೋಗಾಲಯ ತಂತ್ರಜ್ಞರು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ