ಶುಕ್ರವಾರ, ನವೆಂಬರ್ 3, 2023

ನ.07ರಂದು ಹೆಚ್‍ಟಿ, ಇಹೆಚ್‍ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ

ಬಳ್ಳಾರಿ,ನ.03(ಕರ್ನಾಟಕ ವಾರ್ತೆ): ನಗರ ಜೆಸ್ಕಾಂ ಉಪ ವಿಭಾಗ-1 ಮತ್ತು 2ರ ವ್ಯಾಪ್ತಿಯಲ್ಲಿ ಬರುವ ಹೆಚ್.ಟಿ ಮತ್ತು ಇ.ಹೆಚ್.ಟಿ ವಿದ್ಯುತ್ ಗ್ರಾಹಕರ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಲು ಮತ್ತು ಬಗೆಹರಿಸಲು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಲಯ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ಹೆಚ್.ಟಿ ಮತ್ತು ಇ.ಹೆಚ್.ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯನ್ನು ನ.07ರಂದು ಬೆಳಿಗ್ಗೆ 11 ಗಂಟೆಗೆ ವಲಯ ಕಚೇರಿಯ ಮೊದಲ ಮಹಡಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಇ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ