ಸೋಮವಾರ, ನವೆಂಬರ್ 6, 2023

ಯುವತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ನ.06(ಕರ್ನಾಟಕ ವಾರ್ತೆ): ನಗರದ ಪಾತ್ರಬೂದಿಹಾಳ್‍ನ ಕಾಕರ್ಲತೋಟ ನಿವಾಸಿ ಮೌನಿಕ ತಂದೆ ಕೃಷ್ಣಪ್ಪ ಎನ್ನುವ 19 ವರ್ಷದ ಯುವತಿ ನ.03 ರಂದು ಕಾಣೆಯಾಗಿರುವ ಕುರಿತು ಎ.ಪಿ.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಕಾಣೆಯಾದ ಯುವತಿಯ ಚಹರೆ ಗುರುತು: ಎತ್ತರ 5 ಅಡಿ, ಸಾಧಾರಣ ಮೈಕಟ್ಟು, ದುಂಡುಮುಖ, ಕಪ್ಪನೆ ಮೈಬಣ್ಣ ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಕಲರ್ ಚೆಕ್ಸ್ ಟಾಪ್, ಡಾರ್ಕ್ ಬ್ಲೂ ಕಲರ್ ವೇಲ್ ಮತ್ತು ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು, ಭಾಷೆ ಮಾತನಾಡುತ್ತಾಳೆ. ಮೇಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಎ.ಪಿ.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ದೂ.08392-250033, ಮೊ.9480803096, ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಹಾಗೂ ಇಮೇಲ್ apmcblr@ksp.gov.in ಮಾಹಿತಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ