ಬುಧವಾರ, ನವೆಂಬರ್ 8, 2023
ಅಂಗವಿಕಲರಿಗೆ ವೈಯಕ್ತಿಕ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ನ.08(ಕರ್ನಾಟಕ ವಾರ್ತೆ):
ಕಂಪ್ಲಿ ಪುರಸಭೆಯ 2021-22ನೇ ಸಾಲಿನ ಎಸ್.ಎಫ್.ಸಿ ಶೇ.05ರ ವೈಯಕ್ತಿಕ ಸೌಲಭ್ಯದಡಿ ಅಂಗವಿಕಲರಿಂದ ವೈಯಕ್ತಿಕ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ತಿಳಿಸಿದ್ದಾರೆ.
*ಬೇಕಾದ ದಾಖಲೆಗಳು:* ನಿಗದಿತ ಅರ್ಜಿ ನಮೂನೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ಪಡಿತರ ಚೀಟಿ, ಆಧಾರ್‍ಕಾರ್ಡ್, ಮತದಾರರ ಗುರುತಿನ ಚೀಟಿ, ಯುಡಿಐಡಿ ಕಾರ್ಡ್, ಅಂಗವಿಕಲರ ವೈದ್ಯಕೀಯ ಪತ್ರ (ಶೇ.70ರಷ್ಟು ಇದ್ದವರು ಮಾತ್ರ).
ಅರ್ಜಿ ಸಲ್ಲಿಸಲು ನ.18 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ