ಗುರುವಾರ, ಜೂನ್ 13, 2024
ಜೂ.15 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಲಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.15 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಉಪಕೇಂದ್ರದ ಫೀಡರ್‍ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‍ಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-52 ಶಂಕರಬಂಡೆ ಐಪಿ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್, ಕಮ್ಮರಚೇಡು ಗ್ರಾಮಗಳು.
ಎಫ್-53 ಶಂಕರಬಂಡೆ ಎನ್.ಜೆ.ವೈ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್ ಮಿಂಚೇರಿ, ಬುರ್ರನಾಯಕನಹಳ್ಳಿ ಗ್ರಾಮಗಳು. ಎಫ್-54 ಬಿಸಲಹಳ್ಳಿ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ಸೋಲಾರ್ ತಗ್ಗಿನಬೂದಿಹಾಳ್ ಗ್ರಾಮಗಳು.
ಎಫ್-55 ಅಸುಂಡಿ ಐಪಿ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ ಕೃಷಿ ಪ್ರದೇಶಗಳು.
ಎಫ್-56 ಕಮ್ಮರಚೇಡು ಎನ್.ಜೆ.ವೈ ಫೀಡರ್ ಮಾರ್ಗದ ತಲಮಾಮಿಡಿ, ಕಮ್ಮರಚೇಡು, ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ, ವಿಘ್ನೇಶ್ವರ ಕ್ಯಾಂಪ್, ಧನಲಕ್ಷ್ಮೀ ಕ್ಯಾಂಪ್, ಕೆರೆ ಕ್ಯಾಂಪ್, ಮಾಳೆಗಡ್ಡೆ ಕ್ಯಾಂಪ್ ಗ್ರಾಮಗಳು.
ಎಫ್-95 ಫೀಡರ್‍ನ ರೂಪನಗುಡಿ ಐಪಿ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಕೃಷಿ ಪ್ರದೇಶಗಳು. ಎಫ್-96 ಫೀಡರ್‍ನ ರೂಪನಗುಡಿ ಎನ್‍ಜೆವೈ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ