ಶುಕ್ರವಾರ, ಆಗಸ್ಟ್ 11, 2023
ಬಳ್ಳಾರಿ ನಗರದ ಶ್ರೀ ಕರಿಮಾರೆಮ್ಮ ದೇವಸ್ಥಾನದ ವಾರ್ಷಿಕ ಜಾತ್ರೆ ಆ.15 ರಂದು
ಬಳ್ಳಾರಿ,ಆ.11(ಕರ್ನಾಟಕ ವಾರ್ತೆ):
ನಗರದ 35 ನೇ ವಾರ್ಡ್‍ನ ಕರಿಮಾರೆಮ್ಮ ಕಾಲೋನಿಯ ಕೊಳಗಲ್ ರಸ್ತೆಯ ಶ್ರೀ ಕರಿಮಾರೆಮ್ಮ ದೇವಸ್ಥಾನದ ವಾರ್ಷಿಕ ಜಾತ್ರೆಯು ಆಗಸ್ಟ್ 15 ರಂದು ನಡೆಯಲಿದೆ ಎಂದು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಹೆಚ್.ಪ್ರಕಾಶ್‍ರಾವ್ ಅವರು ತಿಳಿದ್ದಾರೆ.
ಅಂದು ಬೆಳಿಗ್ಗೆ 8.30 ರಿಂದ ಕೌಲ್‍ಬಜಾರ್‍ನ ಮುಖ್ಯ ರಸ್ತೆಯಿಂದ ಪ್ರತಿ ವರ್ಷದಂತೆ ಶ್ರೀ ಕರಿಮಾರೆಮ್ಮನವರ ಉತ್ಸವ ಆರಂಭಗೊಂಡು ಮಧ್ಯಾಹ್ನ ದೇವಸ್ಥಾನಕ್ಕೆ ತಲುಪಲಿದೆ ಹಾಗೂ ಸಂಜೆ 04 ಕ್ಕೆ “ಮಹಾಕುಂಭ ಜಲ ಉತ್ಸವ” ಜರುಗಲಿದೆ. ಡೊಳ್ಳು ಕುಣಿತ ಮತ್ತು ತಾಷಾರಾಂ ಡೋಲ್ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಧಾರ್ಮಿಕ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ