ಗುರುವಾರ, ಆಗಸ್ಟ್ 10, 2023
ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ
ಬಳ್ಳಾರಿ,ಆ.10(ಕರ್ನಾಟಕ ವಾರ್ತೆ):
ಬಳ್ಳಾರಿ ತಾಲೂಕಿನ ಪೂರ್ವ ವಲಯ ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆಕೆಆರ್‍ಡಿಬಿಯಿಂದ 100 ಲಕ್ಷ ರೂ.ಗಳ ಅನುದಾನಡಿಯಲ್ಲಿ 10 ಹೊಸ ಶಾಲಾ ಕೊಠಡಿಗಳು ನಿರ್ಮಾಣವಾಗಿವೆ. ಈಗಾಗಲೇ 10 ಶಾಲಾ ಕೊಠಡಿಗಳ ಹಸ್ತಾಂತರ ಆಗಿದೆ. ಅದರಲ್ಲಿಯೇ ಮಕ್ಕಳಿಗೆ ಪಾಠ-ಪ್ರವಚನ ನಡೆಯುತ್ತಿವೆ. ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಬಳ್ಳಾರಿ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸಣ್ಣ-ಪುಟ್ಟ ಕೆಲಸಗಳು ಬಾಕಿ ಇದ್ದುದರಿಂದ ಮುಖ್ಯಗುರುಗಳಿಗೆ ಹಸ್ತಾಂತರಗೊಂಡಿರುವುದಿಲ್ಲ. ಆ.01 ರಂದು ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಗುತ್ತಿಗೆದಾರರು ಮತ್ತು ಮುಖ್ಯಶಿಕ್ಷಕರು ಶಾಲೆಗೆ ಭೇಟಿ ನೀಡಿ, ಎಲ್ಲರ ಸಮ್ಮುಖದಲ್ಲಿ ಚರ್ಚೆ ನಡೆಸಿ ಅಂದು ಹೊಸ ಕೊಠಡಿಗಳಲ್ಲಿ ಮಕ್ಕಳ ಕಲಿಕಾ ಬೋಧನೆ ಚಟುವಟಿಕೆ ನಡೆಸಲು ಕ್ರಮಕೈಗೊಳ್ಳಲಾಗಿದೆ.
ಹೊಸ ಕಟ್ಟಡ ಪೂರ್ಣಗೊಂಡಿರುವುದರಿಂದ ಆ ಕಟ್ಟಡದಲ್ಲಿ ಮಕ್ಕಳಿಗೆ ಪಾಠ-ಪ್ರವಚನ ಮಾಡುವಂತೆ ಶಿಕ್ಷಕರುಗಳಿಗೆ ತಿಳಿಸಲಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಶಿಥೀಲಗೊಂಡ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ-ಪ್ರವಚನ ಕೈಗೊಳ್ಳುತ್ತಿಲ್ಲ, ಬದಲಾಗಿ ಹೊಸ ಕಟ್ಟಡದಲ್ಲಿಯೇ ಪಾಠ-ಪ್ರವಚನ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸಿರಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: (ಡೈಸ್ ಕೋಡ್ 29120907701)
ಮಕ್ಕಳ ಸಂಖ್ಯೆ (1ರಿಂದ 08ನೇ ತರಗತಿ): 792
ಹಳೆಯ ಸಂಸ್ಕøತಿ ಕಟ್ಟಡಗಳು: 4
ದುರಸ್ಥಿಯಲ್ಲಿರುವ ಕೊಠಡಿಗಳ ಸಂಖ್ಯೆ: 4
ಹೊಸ ಕೊಠಡಿಗಳ ಸಂಖ್ಯೆ: 10
ಖಾಯಂ ಶಿಕ್ಷಕರು: 14
ಅತಿಥಿ ಶಿಕ್ಷಕರು: 7
ಜಿಲ್ಲಾ ಉಸ್ತುವಾರಿ ಸಚಿವರ ಸಮಯವಕಾಶ ಸಿಕ್ಕಿದ ತಕ್ಷಣವೇ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹನುಮಕ್ಕ ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ