ಮಂಗಳವಾರ, ಆಗಸ್ಟ್ 8, 2023
ಧಾರವಾಡ ಜಿಲ್ಲಾ ಸೈನಿಕ ಮಂಡಳಿ ಪುನರಚನೆ: ಅಧಿಕಾರೇತರ ಸದಸ್ಯರಾಗಲು ಅರ್ಜಿ ಆಹ್ವಾನ
ಬಳ್ಳಾರಿ,ಆ.08(ಕರ್ನಾಟಕ ವಾರ್ತೆ):
ಧಾರವಾಡ ಜಿಲ್ಲಾ ಸೈನಿಕ ಮಂಡಳಿಗೆ ಬಳ್ಳಾರಿ, ವಿಜಯನಗರ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಂದ ಮಾಜಿ ಸೈನಿಕರ ಪ್ರತಿನಿಧಿಗಳನ್ನು ಅಧಿಕಾರೇತರ ಸದಸ್ಯರಾಗಲು ಆಯ್ಕೆ ಮಾಡಲಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ನೆಲೆಸಿರುವ ಮಾಜಿ ಸೈನಿಕರು ಜಿಲ್ಲಾ ಮಂಡಳಿಯ ಅಧಿಕಾರೇತರ ಸದಸ್ಯರಾಗಲು ಅರ್ಜಿ ಆಹ್ವಾನಿಸಲಾಗಿದೆ. ಎಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕ ಎಮ್.ಎಸ್.ಲೋಲಾಕ್ಷ ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲಾ ಸೈನಿಕ ಮಂಡಳಿಯ ಮೂರು ವರ್ಷಗಳ ಅವಧಿಯು ಮುಗಿದಿದ್ದು, ಮುಂದಿನ ಮೂರು ವರ್ಷಗಳಿಗೆ ಹೊಸದಾಗಿ ಜಿಲ್ಲಾ ಸೈನಿಕ ಮಂಡಳಿಯನ್ನು ರಚಿಸಬೇಕಾಗಿರುತ್ತದೆ. ಆದ್ದರಿಂದ ಮಾಜಿ ಸೈನಿಕರ ಪುನರ್ವಸತಿ ಮತ್ತು ಕಲ್ಯಾಣಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ತೊಡಗಿಸಿಕೊಳ್ಳಲು ಇಚ್ಛೆಯುಳ್ಳ ಮಾಜಿ ಅಧಿಕಾರಿಗಳು/ಸೈನಿಕರು, ಮಾಜಿ ಅಧಿಕಾರಿ/ಸೈನಿಕರ ಪತ್ನಿಯರು ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ ಗಣ್ಯ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಮತ್ತು ಇಚ್ಚಾ ಪತ್ರವನ್ನು ಸಲ್ಲಿಸಬಹುದು.
ಆಸಕ್ತಿಯುಳ್ಳವರು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣ, ಧಾರವಾಡ – 580001 ಇಲ್ಲಿಗೆ ಸೆಪ್ಟೆಂಬರ್ 10 ರೊಳಗೆ ತಮ್ಮ ವಿವರಗಳನ್ನು ಕಳುಹಿಸಬಹುದಾಗಿದೆ. ವೈಯಕ್ತಿಕ ವಿವರಗಳ ನಮೂನೆ ಮತ್ತು ಇಚ್ಛಾ ಪತ್ರದ ನಮೂನೆಗಳನ್ನು ಇ-ಮೇಲ್ ಮೂಲಕ ಅಥವಾ ವೈಯಕ್ತಿಕವಾಗಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.0836–24401776 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ