ಮಂಗಳವಾರ, ಆಗಸ್ಟ್ 8, 2023
ಸಿರುಗುಪ್ಪ: ಡೇ-ನಲ್ಮ್ ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ,ಆ.08(ಕರ್ನಾಟಕ ವಾರ್ತೆ):
ಸಿರುಗುಪ್ಪ ನಗರಸಭೆ ಕಾರ್ಯಾಲಯದಿಂದ ದೀನ್‍ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಮುದಾಯ ಸಂಪನ್ಮೂಲ ವ್ಯಕ್ತಿಗಳ 3 ಹುದ್ದೆಗಳ ಪೈಕಿ, ಈಗಾಗಲೇ 2 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಬಾಕಿ ಉಳಿದ 1 ಹುದ್ದೆಗೆ ಸೃಜಿಸಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಸ್ವ-ಸಹಾಯ(ಗುಂಪು)ಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆ ಸಮಿತಿಯು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.
ಹುದ್ದೆಯ ಹೆಸರು: ಸಮುದಾಯ ಸಂಪನ್ಮೂಲ ವ್ಯಕ್ತಿ, ಹುದ್ದೆ ಸಂಖ್ಯೆ-01, ಮಾಸಿಕ ಗೌರವಧನ: ರೂ.8ಸಾವಿರ, ಸಾರಿಗೆ ಭತ್ಯೆ ರೂ.2ಸಾವಿರ ಆಗಿದ್ದು (ಅಗತ್ಯತೆಗೆ ತಕ್ಕಂತೆ ಗರಿಷ್ಠ), ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 19 ಆಗಿದೆ.
ಅರ್ಹತೆಗಳು: ವಯಸ್ಸು 18 ರಿಂದ 45 ವರ್ಷ ಹೊಂದಿರಬೇಕು, ಕನಿಷ್ಟ ಪಿಯುಸಿ ದ್ವಿತೀಯ ವರ್ಷ ಉತ್ತೀರ್ಣ (ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ), ಕಂಪ್ಯೂಟರ್ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು), ಸಿರುಗುಪ್ಪ ನಗರಸಭೆಯ ವ್ಯಾಪ್ತಿಯಲ್ಲಿ ಖಾಯಂ ವಾಸವಿದ್ದು, ಕನಿಷ್ಟ 3 ವರ್ಷಗಳಿಂದ ಸ್ವ-ಸಹಾಯ ಸಂಘ (ಗುಂಪಿನಲ್ಲಿ) ಸದಸ್ಯಯಾಗಿರಬೇಕು, ಆಂತರಿಕ ಸಾಲ ಪಡೆದು ಕಟುಬಾಕಿದಾರರಾಗಿರಬಾರದು, ಸರ್ಕಾರಿ/ಅರೇ ಸಕಾರಿ/ಎನ್.ಜಿ.ಓ ಗಳಲ್ಲಿ ಉದ್ಯೋಗಸ್ಥರಾಗಿರಬಾರದು, ಉತ್ತಮ ಸಂವಹನ ಕೌಶಲ್ಯ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು, ಕಾರ್ಯ ನಿಮಿತ್ತ ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗೆ ಸಂಚಾರಕ್ಕೆ ಸಿದ್ದರಿರಬೇಕು.
ಸಿರುಗುಪ್ಪ ನಗರಸಭೆಯ ವ್ಯಾಪ್ತಿಯ ಗುಂಪಿನ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಾರ್ಯಾಲಯ ಹಾಗೂ ಮೊ.7353745626ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ