ಬುಧವಾರ, ಆಗಸ್ಟ್ 9, 2023

ಮೀನುಗಾರಿಕೆ ಇಲಾಖೆ: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಆ.09(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ ಪ್ರಸ್ತಕ ಸಾಲಿನಲ್ಲಿ ಫಲಾನುಭವಿ ಆಧಾರಿತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಎನ್.ಬಸವನಗೌಡ ಅವರು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.60 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚ ಶೇ.40 ರಂತೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಹೊಸ ಪಾಲನೆ ಕೊಳಗಳ ನಿರ್ಮಾಣ(ನರ್ಸರಿ/ಮೀನುಮರಿ ಪಾಲನೆ ಕೊಳಗಳು), ಲವಣ/ಕ್ಷಾರಿಯ ಪ್ರದೇಶಗಳಿಗೆ ಹೊಸ ಕೊಳಗಳ ನಿರ್ಮಾಣ, ಮತ್ತು ಹೂಡಿಕೆ ವೆಚ್ಚ ಹೊಸ ಮೀನುಕೃಷಿ ಕೊಳಗಳ ನಿರ್ಮಾಣ, ಮತ್ತು ಸಮಗ್ರ ಮೀನುಕೃಷಿ, ಸ್ಕ್ಯಾಂಪಿ, ಪಂಗಾಸಿಯಸ್, ತಿಲಾಪಿಯಾ ಸೇರಿದಂತೆ ಸಿಹಿ ನೀರಿನ ಜಲಕೃಷಿಗೆ ಹೂಡಿಕೆ ವೆಚ್ಚಗಳು, ಘಟಕವೆಚ್ಚದಲ್ಲಿ ರೂ.8 ಲಕ್ಷ ಹೂಡಿಕೆ ವೆಚ್ಚ ಸೇರಿದಂತೆ ಹಿನ್ನೀರು/ಲವಣ/ಕ್ಷಾರಿಯಾ/ಪ್ರದೇಶಗಳಲ್ಲಿ ಬಯೋಪೆÇ್ಲೀಕ್ ಕೊಳಗಳ ನಿರ್ಮಾಣ ಸಿಹಿನೀರಿನ ಪ್ರದೇಶಗಳಿಗೆ ಬಯೋಪ್ಲೋಕ್ ಕೊಳಗಳ ನಿರ್ಮಾಣ (ಹೆಕ್ಟೇರಿಗೆ 4 ಲಕ್ಷ ರೂ. ಹೂಡಿಕೆ ವೆಚ್ಚ ಸೇರಿದಂತೆ) ಐಸ್ ಬಾಕ್ಸ್‍ನೊಂದಿಗೆ ಮೋಟರ್ ಸೈಕಲ್, ಮೀನು ಮಾರಾಟಕ್ಕಾಗಿ ಇ-ರಿಕ್ಷಾಗಳನ್ನು ಒಳಗೊಂಡಂತೆ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ, ಅಲಂಕಾರಿಕ ಮೀನುಗಳ ಕಿಯೋಸ್ಕ್ ಸೇರಿದಂತೆ ಮೀನು ಕಿಯೋಸ್ಕ್‍ಗಳ ನಿರ್ಮಾಣ, ಶಾಖ ನಿರೋಧಕ ವಾಹನಗಳು, ಸಾಂಪ್ರಾದಾಯಕ ಮೀನುಗಾರರಿಗೆ ಎಫ್‍ಆರ್‍ಪಿ ಬೋಟ್ ಮತ್ತು ಬಲೆಗಳನ್ನು ಖರೀದಿಸಲು ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಆಸಕ್ತಿ ಹೊಂದಿರುವ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಮೊ.9901244116 ಮತ್ತು ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯ ಮೊ.9620177588 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ