ಶುಕ್ರವಾರ, ನವೆಂಬರ್ 10, 2023

ಕೃಷಿ-ಡ್ರೋನ್ ತಂತ್ರಜ್ಞಾನ ಪ್ರದರ್ಶನ ನ.16ರಿಂದ ಮೂರು ದಿನಗಳ ಕಾಲ

ಬಳ್ಳಾರಿ,ನ.10(ಕರ್ನಾಟಕ ವಾರ್ತೆ): ಐಸಿಎಆರ್-ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆ, ಸಂಶೋಧನಾ ಕೇಂದ್ರ ವತಿಯಿಂದ ಮೂರು ದಿನಗಳ ಕಾಲ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆಯ, ಸಂಶೋಧನಾ ಕ್ಷೇತ್ರ ಹಾಗೂ ಶ್ರೀಧರಗಡ್ಡೆ ಮತ್ತು ಲಕ್ಷ್ಮೀನಗರ ಕ್ಯಾಂಪ್ ಗ್ರಾಮಗಳಲ್ಲಿ ನ.16 ರಿಂದ 18ರವರೆಗೆ ಆಯೋಜಿಸಲಾಗಿದೆ. ರಾಷ್ಟ್ರೀಯ ಅಗ್ರಿ-ಡ್ರೋನ್ ಯೋಜನೆಯಡಿಯಲ್ಲಿ, ಐಸಿಎಆರ್-ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ (ಎಟಿಎಆರ್‍ಐ), ಲುಧಿಯಾನ, ಇದರ ಧನಸಹಾಯದೊಂದಿಗೆ ಆಯೋಜಿಸಲಾಗಿದೆ. ನ.16 ರಂದು ಬೆಳಿಗ್ಗೆ 09 ಗಂಟೆಗೆ ಸಂಶೋಧನಾ ಕ್ಷೇತ್ರದಲ್ಲಿ ಆಯೋಜಿಸಿರುವ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. *ಕಾರ್ಯಕ್ರಮ ಸಮನ್ವಯ ತಂಡ:* ಹಿರಿಯ ವಿಜ್ಞಾನಿ(ಅರಣ್ಯ) ಡಾ.ಎಂ.ಎನ್.ರಮೇಶ ಮೊ.9630437467, ತಂತ್ರಜ್ಞ(T1)&IC.FS ಗೌರವ್ ಭಾಟಿ ಮೊ.9148951990, ತಂತ್ರಜ್ಞ(T1) ವೃಷಬೇಂದ್ರಪ್ಪ ಮೊ.78991 53251, ತಂತ್ರಜ್ಞ(T1) ಅಭಿಷೇಕ್ ಕುಮಾಸಿರ್‍ಂಗ್, ಮೊ.95572 79226. ಕಾರ್ಯ ನಿರ್ವಾಹಕ ಮುಖ್ಯಸ್ಥರು ಡಾ.ಎಂ.ಪ್ರಭಾವತಿ ಮೊ.8123481237 soilcons21bly@gmail.com ಹಿರಿಯ ವಿಜ್ಞಾನಿ (ಅರಣ್ಯ), ಡಾ.ಎಂ.ಎನ್. ರಮೇಶ, ಮೊ.9630437467 MN.Ramesha@icar.gov.inmnrameshaicar@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ