ಬುಧವಾರ, ನವೆಂಬರ್ 8, 2023

ಅಪರಿಚಿತ ಮೃತ ಗಂಡಸಿನ ಶವ; ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ನ.08(ಕರ್ನಾಟಕ ವಾರ್ತೆ): ನಗರದ ಕೆ.ಇ.ಬಿ ಸರ್ಕಲ್ ಹತ್ತಿರ ವಸತಿ ಗೃಹದ ಗೇಟ್ ಪಕ್ಕದಲ್ಲಿ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಬಳಲಿ, ಆರೈಕೆ ಇಲ್ಲದೇ ಅ.28ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಗೆ ಸಹಕರಿಸಬೇಕು ಎಂದು ಗಾಂಧಿನಗರ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಎತ್ತರ ಸುಮಾರು 5.1 ಅಡಿ, ಕಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲುಗಳಿದ್ದು, ಮೀಸೆ, ಗಡ್ಡ ಹೊಂದಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆಗಳು: ಬಿಳಿ ಮಿಶ್ರಿತ ಬೂದು ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು, ಕೆಂಪು, ನೀಲಿ ಮತ್ತು ಹಳದಿ ಬಣ್ಣದ ಪಟ್ಟಿ ಇರುವ ಅಡ್ಡಪಂಚೆ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗಾಂಧಿನಗರ ಪೆÇಲೀಸ್ ದೂ.08392-272192, ಪಿ.ಐ ಮೊ.9480803046, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದಾಗಿದೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ