ಶುಕ್ರವಾರ, ಮಾರ್ಚ್ 31, 2023
ಮಹಿಳೆ ಕಾಣೆ; ಪ್ರಕರಣ ದಾಖಲು
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ 5ನೇ ವಾರ್ಡ್‍ನ ನಿವಾಸಿ ಶಂಕ್ರಮ್ಮ ಎನ್ನುವ 32 ವರ್ಷದ ಮಹಿಳೆ ಮಾ.9ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ತೆಕ್ಕಲಕೋಟೆ ಪೊಲೀಸ್‍ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ 4.10 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟಾಪ್, ಬಿಳಿ ಬಣ್ಣದ ಪೈಜಾಮ್ ಧರಿಸಿರುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆ ದೂ.08392-248013, ಮೊ.9480803055, ತೆಕ್ಕಲಕೋಟೆ ವೃತ್ತದ ಸಿಪಿಐ ಮೊ.9480803033, ಸಿರುಗುಪ್ಪ ಉಪವಿಭಾಗ ಡಿಎಸ್‍ಪಿ ಮೊ.9480803021, ಬಳ್ಳಾರಿ ಎಸ್ಪಿ ಮೊ.08392-258102 ಗೆ ಸಂಪರ್ಕಿಸಬಹುದಾಗಿದೆ.
--------
ಚುನಾವಣಾ ನೀತಿ ಸಂಹಿತೆ ಜಾರಿ; ದೇವಸ್ಥಾನ, ಇತರೆ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಿರ್ಬಂಧ
ಬಳ್ಳಾರಿ,ಮಾ.31(ಕರ್ನಾಟಕ ವಾತೆರ್ ): ಕರ್ನಾಟಕ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ-2023ರ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ, ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಠ, ಮಂದಿರ, ಜೈನ್ ಬಸದಿಗಳಲ್ಲಿ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಸಮುದಾಯ ಭವನ, ಯಾತ್ರಿನಿವಾಸ ಪ್ರದೇಶ, ಕಲ್ಯಾಣ ಮಂಟಪ ಜಾಗ ಪ್ರದೇಶದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಹೆಚ್.ಪ್ರಕಾಶ್ ಅವರು ತಿಳಿಸಿದ್ದಾರೆ.
ರಾಜಕೀಯ ಚಟುವಟಿಕೆಗಳಿಗೆ ದೇವಸ್ಥಾನದ ಕೊಠಡಿಗಳು, ಕಲ್ಯಾಣ ಮಂಟಪ, ಸಮುದಾಯ ಭವನ, ಖಾಲಿ ಜಾಗ, ದೇವಸ್ಥಾನದ ಆವರಣ, ಇತರೆ ಧಾರ್ಮಿಕ ಸ್ಥಳಗಳನ್ನು ನೀಡಲು ಅವಕಾಶ ಇರುವುದಿಲ್ಲ. ದೇವಸ್ಥಾನದಲ್ಲಿ ರಾಜಕೀಯ ವ್ಯಕ್ತಿಗಳು ಯಾವುದೇ ಸಮಾರಂಭ, ಸಭೆ, ಇನ್ನಿತರ ರಾಜಕೀಯ ಚಟುವಟಿಕೆಗಳು ನಡೆಸಲು ಅವಕಾಶ ಇರುವುದಿಲ್ಲ. ದೇವಸ್ಥಾನದ ಆವರಣದಲ್ಲಿ ರಾಜಕೀಯ ವ್ಯಕ್ತಿಗಳಿಂದ ಅನವಶ್ಯಕ ಕಾರ್ಯಕ್ರಮವನ್ನು ಆಯೋಜಿಸಿ ಊಟದ ವ್ಯವಸ್ಥೆಯನ್ನು ಮಾಡಿ ಹಂಚುವುದಕ್ಕೆ ಅವಕಾಶ ಇರುವುದಿಲ್ಲ. ದೇವಸ್ಥಾನದ ಧ್ವನಿವರ್ಧಕಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸುವಂತಿಲ್ಲ.
ಚುನಾವಣೆ ಸಂಧರ್ಭದಲ್ಲಿ ರಾಜಕೀಯ ವ್ಯಕ್ತಿಗಳ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇತರೆ ಧಾರ್ಮಿಕ ಸ್ಥಳಗಳಲ್ಲಿ ಭೇಟಿ ನೀಡಿ ಆವರಣದಲ್ಲಿ ಸಭೆ ಸಮಾರಂಭ ಅಥವಾ ಇನ್ನಿತರೆ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳ ಆದೇಶವನ್ನು ದಿಕ್ಕರಿಸಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಲ್ಲಿ ಧಾರ್ಮಿಕ ಸಂಸ್ಥೆಗಳು (ತಡೆಗಟ್ಟುವಿಕೆ ಅಥವಾ ದುರುಪಯೋಗ) ಕಾಯ್ದೆ 1988 ರ ಪ್ರಕಾರ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
---------
ಸಾರ್ವತ್ರಿಕ ವಿಧಾನಸಭೆ ಚುನಾವಣೆ; ಕಂಟ್ರೋಲ್ ರೂಂ ಆರಂಭ
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಗಮ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ಸಂಬಂಧ ಸಾರ್ವಜನಿಕರ ದೂರು-ದುಮ್ಮಾನಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.
ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳು, ಮಾಹಿತಿ ಹಾಗೂ ಇತರೆ ಸಾರ್ವಜನಿಕ ಕುಂದುಕೊರತೆಗಳು ಇದ್ದಲ್ಲಿ ಟೋಲ್ ಫ್ರೀ ಸಂಖ್ಯೆ 08392-277100 ಮತ್ತು 1950 ಕರೆ ಮಾಡಿ ತಿಳಿಸಿಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
--------
ಸಾರ್ವತ್ರಿಕ ವಿಧಾನಸಭಾ ಚುನಾವಣೆ
ಜಿಲ್ಲೆಯಲ್ಲಿ 24 ಚೆಕ್‍ಪೋಸ್ಟ್ ಭದ್ರತೆ
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ 24 ಚೆಕ್‍ಪೋಸ್ಟ್ ಸ್ಥಾಪಿಸಿ, ನೇರ ದೃಶ್ಯಾವಳಿ ಸೆರಿಹಿಡಿಯಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೇ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆ ಅಂತರ್‍ರಾಜ್ಯ ಗಡಿ ಪ್ರದೇಶವನ್ನು ಹೊಂದಿದ್ದು, ಅಂತರ್‍ಜಿಲ್ಲಾ ಗಡಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೀವ್ರ ಬಿಗಿಯಾದ ಕ್ರಮವನ್ನು ಕೈಗೊಂಡಿದೆ ಅಲ್ಲದೇ, ಎಚ್ಚರಿಕೆಯನ್ನು ವಹಿಸಲಾಗಿದೆ.
ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಡಲು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಅಲ್ಲಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಇಲ್ಲಿನ ಕಾರ್ಯಚಟುವಟಿಕೆಗಳ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಆಳವಡಿಸಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಣೆ ಮಾಡುವುದು ಆಪ್ ಮೂಲಕವೂ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಎಂಸಿಸಿ ತಂಡದ ಮುಖ್ಯಸ್ಥರು ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲೆಯಲ್ಲಿ 8, ಅಂತರ್‍ಜಿಲ್ಲೆ ಗಡಿಯಲ್ಲಿ 4 ಮತ್ತು ಅಂತರರಾಜ್ಯ ಆಂಧ್ರಪ್ರದೇಶ ಗಡಿಭಾಗದಲ್ಲಿ 12 ಸೇರಿ 24 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
5 ಕ್ಷೇತ್ರದಲ್ಲಿ 24 ಚೆಕ್‍ಪೋಸ್ಟ್ ಸ್ಥಾಪನೆ: ಜಿಲ್ಲೆಯಲ್ಲಿ ಒಟ್ಟು 5 ಮತಕ್ಷೇತ್ರಗಳಿಗೆ ಜಿಲ್ಲೆಯಾದ್ಯಂತ ಒಟ್ಟು 24 ಚೆಕ್‍ಪೆÇೀಸ್ಟ್ ಸ್ಥಾಪಿಸಲಾಗಿದೆ. ಪ್ರತಿ ಚೆಕ್‍ಪೆÇೀಸ್ಟ್‍ನಲ್ಲಿ 3 ಎಸ್‍ಎಸ್‍ಟಿ ಅಧಿಕಾರಿಗಳು ಹಾಗೂ ಪೆÇಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ವಿಡಿಯೋ ಕಣ್ಗಾವಲು ತಂಡಗಳನ್ನು ನೇಮಕ ಮಾಡಲಾಗಿದೆ.
ಕ್ಷೇತ್ರವಾರು ಚೆಕ್‍ಪೋಸ್ಟ್ ಸ್ಥಾಪನೆ:
*ಕಂಪ್ಲಿ ವಿಧಾನಸಭಾ ಕ್ಷೇತ್ರ 2: ಕಂಪ್ಲಿ ಕ್ಷೇತ್ರದಲ್ಲಿ 2 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಅಂತರ್‍ಜಿಲ್ಲೆ ಕೊಪ್ಪಳ ಗಡಿಭಾಗದಲ್ಲಿ ಕಂಪ್ಲಿ ಸೇತುವೆ ಬಳಿ ಮತ್ತು ವಿಜಯನಗರ ಜಿಲ್ಲೆ ಗಡಿಭಾಗದ ದೇವಲಾಪುರ - ಉಪ್ಪಾರಹಳ್ಳಿ ವೃತ್ತದಲ್ಲಿ ಸ್ಥಾಪನೆ ಮಾಡಲಾಗಿದೆ.
*ಸಿರುಗುಪ್ಪ ವಿಧಾನಸಭಾ ಕ್ಷೇತ್ರ 5: ಸಿರುಗುಪ್ಪ ಕ್ಷೇತ್ರದಲ್ಲಿ 5 ಚೆಕ್‍ಪೋಸ್ಟ್‍ಗಳನ್ನು ಆರಂಭಿಸಲಾಗಿದ್ದು, ಅಂತರ್‍ಜಿಲ್ಲೆ ರಾಯಚೂರು ಗಡಿಭಾಗದ ಇಬ್ರಾಹಿಂಪುರ-ಇಬ್ರಾಹಿಂಪುರ ಗ್ರಾಮ, ಅಂತರ್‍ರಾಜ್ಯ ಗಡಿಭಾಗದ ಇಟ್ಟಿಗೆಹಾಳ್, ವಟ್ಟುಮುರುವಾಣಿ, ಮಾಟಸೂಗೂರು ಹಾಗೂ ಕೆ.ಬೆಳಗಲ್ ಗ್ರಾಮಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ.
* ಬಳ್ಳಾರಿ ಗ್ರಾಮೀಣ ಕ್ಷೇತ್ರ 6: ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಅಂತರ್‍ರಾಜ್ಯ ಆಂಧ್ರಪ್ರದೇಶ ಗಡಿಭಾಗದ ಹಲಕುಂದಿಕ್ರಾಸ್, ಎತ್ತಿನ ಬೂದಿಹಾಳ್ ಕ್ರಾಸ್, ರೂಪನಗುಡಿ ಕ್ರಾಸ್, ಜೋಳದರಾಶಿ ಗ್ರಾಮ, ಕಾರೇಕಲ್ಲು ಗ್ರಾಮ, ಸಿಂಧವಾಳ ಗ್ರಾಮ ಒಳಗೊಂಡಂತೆ 6 ಕಡೆ ಚೆಕ್ ಪೆÇೀಸ್ಟ್‍ಗಳನ್ನು ಸ್ಥಾಪಿಸಲಾಗಿದೆ.
* ಬಳ್ಳಾರಿ ನಗರ ಕ್ಷೇತ್ರ 7 ಚೆಕ್‍ಪೋಸ್ಟ್: ನಗರದಲ್ಲಿ ಕೊಳಗಲ್ ರಸ್ತೆಯ ವಿಮಾನನಿಲ್ದಾಣ ವೃತ್ತ, ಕಾಣೆಕಲ್ ರಸ್ತೆಯ ಆಂಧ್ರಾಳ್ ಬೈಪಾಸ್ ಹತ್ತಿರ, ಮೋಕಾ ರಸ್ತೆಯ ಕೆಇಬಿ ವೃತ್ತ ಹತ್ತಿರ, ತಾಳೂರು ರಸ್ತೆಯ ಮಹಾನಂದಿ ಕೊಟ್ಟಂ ಹತ್ತಿರ, ರೂಪನಗುಡಿ ರಸ್ತೆಯ ದುರ್ಗ ವೃತ್ತದ ಹತ್ತಿರ, ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ ಹತ್ತಿರ, ಅನಂತಪುರ ರಸ್ತೆಯ ಬೈಪಾಸ್ ವೃತ್ತದ ಹತ್ತಿರ ಸೇರಿ 7 ಸ್ಥಾಪಿಸಲಾಗಿದೆ.
* ಸಂಡೂರು ಕ್ಷೇತ್ರ 4 ಚೆಕ್‍ಪೋಸ್ಟ್: ಸಂಡೂರು ಕ್ಷೇತ್ರ ವ್ಯಾಪ್ತಿಯ್ಲಲಿ ಜಿಂದಾಲ್‍ನ ವಿದ್ಯಾನಗರ ವಿಮಾನ ನಿಲ್ದಾಣ ಹತ್ತಿರ, ಅಂತರ್‍ಜಿಲ್ಲೆಯಾದ ಚಿತ್ರದುರ್ಗ ಗಡಿಭಾಗದ ಮೊಟಲಕುಂಟ ಹತ್ತಿರ ಮತ್ತು ಅಂತರ್‍ರಾಜ್ಯ ಆಂಧ್ರಪ್ರದೇಶ ಗಡಿಭಾಗದ ದಿಕ್ಕಲದಿನ್ನಿ, ಜಿ.ಬಸಾಪುರ ಗ್ರಾಮಗಳಲ್ಲಿ 4 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.
-------
ಅನಾಮಧೇಯ ವ್ಯಕ್ತಿ ಮೃತ; ವಾರಸುದಾರರ ಪತ್ತೆಗಾಗಿ
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಗುಗ್ಗರಹಟ್ಟಿಯ ರೈಲ್ವೇ ಗೇಟ್ ಹತ್ತಿರ ಸುಮಾರು 55 ರಿಂದ 60 ವರ್ಷದ ಅನಾಮಧೇಯ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಚಿಕಿತ್ಸೆ ಫಲಿಸದೇ ಮಾ.28ರಂದು ಮೃತ ಪಟ್ಟಿರುತ್ತಾನೆ. ಮೃತ ದೇಹವು ವಿಮ್ಸ್ ಆಸ್ಪತ್ರೆಯ ಶವಗಾರದಲ್ಲಿರುತ್ತದೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೋಲಿಸ್‍ಠಾಣೆಯ ಎಎಸ್‍ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ ಗುರುತು: ಸಾಧರಣ ಮೈಕಟ್ಟು, ಕೋಲುಮುಖ, ಕಪ್ಪು ಮೈಬಣ್ಣ, ಬಿಳಿ ಗಡ್ಡ, ಬೋಳು ತಲೆ, ಎದೆಯ ಎಡಭಾಗದಲ್ಲಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ.
ಮೃತನ ವಾರಸುದಾರರಿದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದಾಗಿದೆ.
-----
ಮದ್ಯ ಸಾಗಾಣಿಕೆ; ವ್ಯಕ್ತಿ ಬಂಧನ
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದ ಗ್ರಾಮ ಪಂಚಾಯತಿ ಕಚೇರಿ ಹತ್ತಿರ ಗಸ್ತು ವೇಳೆ ಮಾಡುತ್ತಿರುವ ಸಮಯದಲ್ಲಿ ಈ.ಈರಣ್ಣ ಎಂಬ ವ್ಯಕ್ತಿಯು ಒಟ್ಟು 86.400 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬಳ್ಳಾರಿ ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.
-----
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2,36,277 ಮತದಾರರು, 234 ಮತಗಟ್ಟೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ 6 ಚೆಕ್‍ಪೋಸ್ಟ್ ಸ್ಥಾಪನೆ: ಉಪವಿಭಾಗಾಧಿಕಾರಿ ಹೇಮಂತ್‍ಕುಮಾರ್
ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಆಕ್ರಮಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು 6 ಕಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್‍ಕುಮಾರ್.ಎನ್ ಅವರು ಮಾಹಿತಿ ನೀಡಿದರು.
ಅವರು, ಶುಕ್ರವಾರ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಚುನಾವಣೆಯ ಮಾಹಿತಿ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,277 ಮತದಾರರು: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,277 ಮತದಾರರಿದ್ದಾರೆ. ಅದರಲ್ಲಿ 1,15,074 ಪುರುಷ ಮತದಾರರು ಹಾಗೂ 1,21,155 ಮಹಿಳಾ ಮತದಾರರು ಮತ್ತು ಇತರೆ 48 ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದ್ದಾರೆ. ಕ್ಷೇತ್ರದಲ್ಲಿ 234 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಆಕ್ರಮಕ್ಕೆ ಕಡಿವಾಣ ಹಾಕಲು ಚೆಕ್‍ಪೋಸ್ಟ್: ಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಲಕುಂದಿಕ್ರಾಸ್, ಎತ್ತಿನ ಬೂದಿಹಾಳ್ ಕ್ರಾಸ್, ರೂಪನಗುಡಿ ಕ್ರಾಸ್, ಜೋಳದರಾಶಿ ಗ್ರಾಮ, ಕಾರೇಕಲ್ಲು ಗ್ರಾಮ, ಸಿಂಧವಾಳ ಗ್ರಾಮ ಒಳಗೊಂಡಂತೆ 6 ಕಡೆ ಚೆಕ್ ಪೆÇೀಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ಎಫ್‍ಎಸ್‍ಟಿ, ಎಸ್‍ಎಸ್‍ಟಿ ತಂಡ ಮತ್ತು ಫ್ಲೈಯಿಂಗ್ ಸÁ್ಕ್ವ್ಯಡ್ ತಂಡಗಳನ್ನು ನಿಯೋಜಿಸಿ ಪರಿಶೀಲಿಸಲಾಗುತ್ತಿದೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಮಾದರಿ ಮತಗಟ್ಟೆ ಕೇಂದ್ರ ಸ್ಥಾಪನೆ: ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಅತಿಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆಯಾಗಿದೆ. ಏ.11 ರವರೆಗೆ ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಲು ಅವಕಾಶವಿದೆ. ಹೊಸದಾಗಿ ನೊಂದಾಯಿಸಿಕೊಂಡವರು ಹೆಚ್ಚಾದಲ್ಲಿ ಮತ್ತು ಒಂದು ಮತಗಟ್ಟೆಗೆ 1,500 ಕ್ಕಿಂತ ಹೆಚ್ಚು ಮತದಾರರಾದಲ್ಲಿ ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 10 ಮಾದರಿ ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಹಾಯವಾಣಿ ಆರಂಭ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದೂರು ಇದ್ದಲ್ಲಿ ದೂ.08392-277800, ಮೊ.6362565615ಗೆ ಕರೆ ಮಾಡಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1950 ಟೋಲ್ ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈಗಾಗಲೇ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಮೋಕಾ ಹತ್ತಿರ 18 ಲಕ್ಷ ಮತ್ತು ಎತ್ತಿನಬೂದಿಹಾಳ್ ಚೆಕ್‍ಪೋಸ್ಟ್ ಹತ್ತಿರ 12 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಚುನಾವಣೆ ನಿಮಿತ್ತ ದಾಖಲೆ ಇಲ್ಲದ ಹಣ, ಮದ್ಯ, ಆಭರಣ, ಇತರೆ ಉಡುಗೊರೆಗಳನ್ನು ಸಾಗಿಸುವಂತಿಲ್ಲ ಮತ್ತು ಹಂಚುವಂತಿಲ್ಲ ಎಂದು ಹೇಳಿದರು.
ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಯಾವುದೇ ನಿರ್ದಾಕ್ಷ್ಯ ಇಲ್ಲದೇ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಆರ್‍ಒ ಬಲರಾಮ ಹಾಗೂ ಕಚೇರಿ ಸಿಬ್ಬಂದಿಗಳು ಇದ್ದರು.
-------
ಗುರುವಾರ, ಮಾರ್ಚ್ 30, 2023
ಚುನಾವಣಾ ಕರಪತ್ರ, ಪೋಸ್ಟರ್ ಮುದ್ರಣ ಮೇಲೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಆದೇಶ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): 2023 ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಚುನಾವಣಾ ಕರಪತ್ರಗಳು ಮತ್ತು ಪೆÇೀಸ್ಟರ್‍ಗಳ ಮುದ್ರಣ ಮತ್ತು ಪ್ರಕಟಣೆಯ ಮೇಲೆ ಅಪಪ್ರಚಾರ ಕುರಿತಂತೆ ಸುಳ್ಳು ಮಾಹಿತಿಯನ್ನು ಮುದ್ರಿಸದಂತೆ ಜಿಲ್ಲಾಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವಂತಹ ಬ್ಯಾನರ್‍ಗಳಾಗಲೀ, ಹೋರ್ಡಿಂಗ್ಸ್‍ಗಳಾಗಲೀ ಮತ್ತು ಕರಪತ್ರಗಳನ್ನಾಗಲಿ ಮುದ್ರಿಸುವಂತಿಲ್ಲ. ಮುದ್ರಿಸಲಾದ ಅಥವಾ ಬಹು-ಗ್ರಾಫ್ ಮಾಡಲಾದ (ಕೈಯಿಂದ ನಕಲು ಮಾಡುವುದನ್ನು ಹೊರತುಪಡಿಸಿ) ಪ್ರತಿಯೊಂದು ಚುನಾವಣಾ ಕರಪತ್ರ, ಕೈ-ಬಿಲ್, ಫಲಕ ಅಥವಾ ಪೆÇೀಸ್ಟರ್ ಮುಂಭಾಗದಲ್ಲಿ ಮುದ್ರಕನ ಹೆಸರು ಮತ್ತು ವಿಳಾಸ ಮತ್ತು ಪ್ರಕಾಶಕರ ಹೆಸರು, ವಿಳಾಸವನ್ನು ಹೊಂದಿರಬೇಕು. ಅಂತಹ ಯಾವುದೇ ಡಾಕ್ಯುಮೆಂಟ್‍ನ ಮುದ್ರಕವು ಉದ್ದೇಶಿತ ಪ್ರಕಾಶಕರಿಂದ ಸಹಿ ಮಾಡಲ್ಪಟ್ಟ ಮತ್ತು ಅವನು ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಲ್ಪಟ್ಟ ಅವನ ಗುರುತಿನ ಘೋಷಣೆಯನ್ನು ದ್ವಿ ಪ್ರತಿಯಲ್ಲಿ(ನಕಲಿನಲ್ಲಿ) ಪಡೆಯಬೇಕು. ಮುದ್ರಣ ಘೋಷಣೆಯ ಒಂದು ಪ್ರತಿಯನ್ನು ಮತ್ತು ದಾಖಲೆಯ ಒಂದು ಪ್ರತಿಯನ್ನು ಮುದ್ರಿಸಿರುವ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಕಳುಹಿಸಬೇಕು.
ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡು ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿರುತ್ತದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
------
ಚುನಾವಣೆ ಸಮಯದಲ್ಲಿ ಅಕ್ರಮ ವೆಚ್ಚದ ಮೇಲೆ ತೀವ್ರಾ ನಿಗಾ
ಸಾರ್ವಜನಿಕರಿಗೆ ಆಸೆ, ಆಮೀಷ ಒಡ್ಡುವುದು ಮತ್ತು ಪ್ರಚೋದಿಸುವಂತಿಲ್ಲ: ಡಿಸಿ ಮಾಲಪಾಟಿ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಯುತವಾಗಿ ನಡೆಸಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕರಿಸುವ ಮೂಲಕ ಈ ವೇಳೆ ಹಣದ ದುರುಪಯೋಗ ಮತ್ತು ಸಾರ್ವಜನಿಕರಿಗೆ ಆಸೆ, ಆಮಿಷಗಳಿಗೆ ಒಳಪಡಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಗೆ ಲಂಚ ನೀಡಬಾರದು ಅಥವಾ ಹಣವನ್ನು ಬಳಸಿ ಲಂಚ ನೀಡಲು ಪ್ರಯತ್ನಿಸಬಾರದು. ಸರಕುಗಳು, ಬೆಲೆಬಾಳುವ ವಸ್ತುಗಳು, ಉಡುಗೊರೆಗÀಳು, ಮದ್ಯ, ಇಂಧನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಅಥವಾ ಶೇಖರಣೆ ಮಾಡುವಂತಿಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಸರ್ವೇಲೆನ್ಸ್ ತಂಡಗಳು, ಚೆಕ್ ಪೆÇೀಸ್ಟ್ ಹಾಗೂ ವೀಡಿಯೊ ಕಣ್ಗಾವಲು ತಂಡಗಳು, ಫ್ಲೈಯಿಂಗ್ ಸ್ಕ್ವ್ಯಾಡ್‍ಗಳು ಕಾರ್ಯನಿರ್ವಹಿಸುತ್ತಿವೆ. ವಿವರಣಾತ್ಮಕ ಮತ್ತು ದೃಢೀಕರಿಸುವ ದಾಖಲೆಗಳಿಲ್ಲದೆ ರೂ.50ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ.
ಚುನಾವಣೆಯ ನಿಯಾಮವಳಿ ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗಿಸುತ್ತದೆ ಎಂದು
ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ತಿ, ತೆರೆದ ಸ್ಥಳಗಳನ್ನು ವಿರೂಪಗೊಳಿಸದಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಕಟ್ಟುನಿಟ್ಟಿನ ಆದೇಶ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಸಾರ್ವಜನಿಕ ಆಸ್ತಿಯನ್ನಾಗಲೀ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಕೆ ಸೇರಿದಂತೆ ಇನ್ನೀತರೆ ಫಲಕಗಳನ್ನು ಹಾಕುವ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿಗೆ ವಿರೂಪಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿದ್ದಾರೆ.
ಸಾರ್ವಜನಿಕ ಪ್ರದೇಶಗಳ ಮೇಲೆ ಅಧಿಕಾರ ಹೊಂದಿರುವ ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿಯಿಲ್ಲದೆ ಯಾವುದೇ ತರಹದ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಸುವಂತಿಲ್ಲ ಮತ್ತು ಈ ರೀತಿ ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಅಂಟಿಸಬಾರದು ಮತ್ತು ಕೆತ್ತನೆ ಮಾಡುವಂತಿಲ್ಲ. ಇಂತಹÀ ಕೃತ್ಯಗಳಿಗೆ ಕುಮ್ಮಕ್ಕು ಅಥವಾ ಸಲಹೆ ನೀಡಿದರೆ ಅಂತಹವರನ್ನು ಆರು ತಿಂಗಳು ಕಾರಾಗೃಹ ಶಿಕ್ಷೆ ಸೇರಿದಂತೆ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣೆ ಪ್ರಚಾರದಿಂದ ಇಂತಹ ವಿರೂಪಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸ್ಥಳೀಯ ಪ್ರಾಧಿಕಾರದ ಪರವಾನಿಗೆ ಇಲ್ಲದೇ ಯಾವುದೇ ತರಹದ ಜಾಹೀರಾತುಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕ, ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳ ಗೋಡೆಗಳ ಮೇಲೆ ಮನಬಂದಂತೆ ಬರೆದು ಭಿತ್ತಿಪತ್ರಗಳನ್ನು ಬರೆದು ವಿರೂಪಗೊಳಿಸುವುದು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಿ ದಂಡನೆಗೆ ಗುರಿ ಪಡಿಸಲಾಗುತ್ತದೆ.
ಈ ಆದೇಶವು ಇಡೀ ಜಿಲ್ಲೆಗೆ ಅನ್ವಯಿಸಲಿದ್ದು, ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
-----
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಏ.1ರಂದು
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಜೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯ 110/11 ಕೆ.ವಿ ಸೌತ್ ವಿದ್ಯುತ್ ವಿತರಣ ಕೇಂದ್ರದ ಎಫ್-47 ಫೀಡರ್‍ನ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದಿಂದ ಏ.1ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅಂದ್ರಾಳ್ ರಸ್ತೆ, ಕೊಲಮಿ ಚೌಕ್, ಮಿಲ್ಲರ ಪೇಟೆ, ಬೊಮ್ಮನಾಳ್ ರೋಡ್ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ 1ರ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
------
ಯುವತಿ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಗಜಗಿನಹಾಳ್ ಗ್ರಾಮದ ನಿವಾಸಿ ಅರಗೋಳ ಸರಸ್ವತಿ ಎನ್ನುವ 21 ವರ್ಷದ ಯುವತಿ ಮಾ.12ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ ಗುರುತು: 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೆಂಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಟಾಪ್, ಕೇಸರಿ ಬಣ್ಣದ ಲಗ್ಗಿನ್, ಕೇಸರಿ ಬಣ್ಣದ ವೇಲ್ ಧರಿಸಿರುತ್ತಾಳೆ.
ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೆÇಲೀಸ್ ಠಾಣೆಯ ಪಿ.ಎಸ್.ಐ ದೂ.08396-220333, ಸಿರುಗುಪ್ಪ ಸಿ.ಪಿ.ಐ ದೂ.08396-220003, ಸಿರುಗುಪ್ಪ ಉಪವಿಭಾಗ ಡಿ.ಎಸ್.ಪಿ. ದೂ.08392-276000 ಅಥವಾ ಬಳ್ಳಾರಿ ಎಸ್.ಪಿ. ದೂ.08932-258400 ಗೆ ಸಂಪರ್ಕಿಸಬಹುದಾಗಿದೆ.
-----
ವಿದ್ಯುತ್ ವ್ಯತ್ಯಯ ಏ.2ರಂದು
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಜೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯ 110/11 ಕೆ.ವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದ ಎಫ್-24 ಫೀಡರ್‍ನ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದಿಂದ ಏ.2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರು ರಸ್ತೆ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳಲ್ಲಿ
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
-----
ಕುರೇಕುಪ್ಪ: ಆಸ್ತಿ ತೆರಿಗೆ ಪರಿಷ್ಕರಣೆ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಕುರೇಕುಪ್ಪ ಪುರಸಭೆಯ 2023-24 ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರ ಸೂಚಿಗಳು ಪರಿಷ್ಕರಣೆಯಾಗದಿದ್ದಲ್ಲಿ ಶೇ.3 ರಿಂದ ಶೇ.5 ರಷ್ಟು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಪೌರಡಳಿತ ನಿರ್ದೇಶನಾಲಯವು ಆದೇಶಿದೆ.
ಪುರಸಭೆಯ ಆಡಳಿತಾಧಿಕಾರಿಗಳು ನಿರ್ಣಯ ಮೇರೆಗೆ 2023-24 ನೇ ಸಾಲಿಗೆ ಶೇ.3 ರಷ್ಟು ತೆರಿಗೆಯನ್ನು ಹೆಚ್ಚುವರಿ ಮಾಡಲು ಅನುಮೋದಿಸಿದ್ದು, ಪ್ರಸ್ತಕ ಸಾಲಿನಿಂದ ಶೇ.3ರಷ್ಟು ಹೆಚ್ಚಿಸಿ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕುರೆಕುಪ್ಪ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿ ಸ್ಥಳಾಂತರ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ನಗರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಯು ಜಿಲ್ಲಾಧಿಕಾರಿಗಳ ಆದೇಶದಂತೆ ಮಾ.31ರಿಂದ ಹೊಸದಾಗಿ ನಿರ್ಮಾಣಗೊಂಡಿರುವ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿದೆ.
ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಪತ್ರ ಹಾಗೂ ರಹಸ್ಯ ಪತ್ರಗಳನ್ನು ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಡಾ.ರಾಜ್‍ಕುಮಾರ್ ರಸ್ತೆ, ಬಳ್ಳಾರಿ. ದೂ.08932-272557 ಹಾಗೂ ddfcs.bly-ka@nic.in ಇ-ಮೇಲ್ ಗೆ ಕಳುಹಿಸಿಕೊಡಬೇಕಾಗಿರುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----
ರಾಷ್ಟ್ರಮಟ್ಟದ ಗುಣಮಟ್ಟ ಖಾತರಿ ಕಾಯಕಲ್ಪ ಪ್ರಶಸ್ತಿಗೆ ಹಂದಿಹಾಳು ಆರೋಗ್ಯ ಕ್ಷೇಮ ಕೇಂದ್ರ ಆಯ್ಕೆ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶದಲ್ಲಿ ಹರಡುವ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಹಾಗೂ ಇತರೆ ಆರೋಗ್ಯ ಸೇವೆ ನೀಡುವ ಉದ್ದೇಶದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾರ್ಯವೈಖರಿ ಮತ್ತು ಸೇವೆಯ ಗುಣಮಟ್ಟವನ್ನು ಆಧರಿಸಿ ನೀಡುವ ಸ್ವಚ್ಚ ಭಾರತ ಅಭಿಯಾನದ ರಾಷ್ಟ್ರಮಟ್ಟದ ಗುಣಮಟ್ಟ ಖಾತರಿ ಕಾಯಕಲ್ಪ ಪ್ರಶಸ್ತಿಗೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಹಂದಿಹಾಳು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಯ್ಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲಬಾರಿಗೆ ಈ ಪ್ರಶಸ್ತಿ ಪಡೆದ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆರೋಗ್ಯ ಕೇಂದ್ರಗಳು ಪ್ರಶಸ್ತಿಗೆ ಭಾಜನವಾಗುವ ರೀತಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ ಈ
ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಹತೆಯ ಶೂಶ್ರೂಷಣಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಪ್ರಸ್ತುತ ಹಂದಿಹಾಳದಲ್ಲಿ ಮೇರಿ ಮೊನಿಕಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ನೀಡಿದ ಸೇವೆಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ತಂಡಗಳು ಬೇಟಿ ನೀಡಿ ಮೌಲ್ಯಾಂಕನವನ್ನು ಕೈಗೊಂಡು ಅಂತಿಮವಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು, ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಅತ್ಯಲ್ಪ ಅವಧಿಯಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಒದಗಿಸಿದ್ದು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ಸ್ಮರಿಸಿದರು.
ಪ್ರಶಸ್ತಿ ದೊರಕುವ ರೀತಿಯಲ್ಲಿ ಕಾರ್ಯನಿರ್ವಹಿಸಿದ ಸಮುದಾಯ ಆರೋಗ್ಯ ಅಧಿಕಾರಿ ಮೇರಿ ಮೊನಿಕಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸುವರ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ನೀಲಕಂಠಪ್ಪ, ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನೌಸೀನ್ ಮರಿಯಂ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ, ಜಿಲ್ಲಾ ಕಾಯಕಲ್ಪ ತಂಡ ಮತ್ತು ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಜಿಲ್ಲಾ ಗುಣಮಟ್ಟ ವ್ಯವಸ್ಥಾಪಕಿ ನಾಗವೇಣಿ, ಜಿಲ್ಲಾ ಎನ್‍ಸಿಡಿ ಸಲಹೆಗಾರರಾದ ಡಾ.ಜಬೀನಾ ತಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
--------
ಬುಧವಾರ, ಮಾರ್ಚ್ 29, 2023
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ
ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ದ
5 ಕ್ಷೇತ್ರಗಳಲ್ಲಿ 24 ಚೆಕ್‍ಪೆÇೀಸ್ಟ್ ಕಣ್ಗಾವಲು, ಏ.11ರವರೆಗೆ ಮತದಾರರ ನೋಂದಣಿಗೆ ಅವಕಾಶ: ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಚುನಾವಣಾ ಆಯೋಗವು 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದ್ದು, ಏಪ್ರಿಲ್ 13ರಿಂದ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದರು.
ಅವರು ಬುಧವಾರ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾಮಪತ್ರ ಸಲ್ಲಿಸಲು ಏ.13 ರಿಂದ ಆರಂಭವಾಗಿ ಏ.20 ಕೊನೆಯ ದಿನವಾಗಿರುತ್ತದೆ. ಏ.21 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಏ.24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ.10 ರಂದು ಮತದಾನ, ಮೇ.13 ಎಣಿಕೆ ನಡೆಯಲಿದ್ದು, ನೀತಿ ಸಂಹಿತೆಯು ಮೆ.15ರವೆಗೆ ಜಾರಿಯಲ್ಲಿರುತ್ತದೆ.
ಚುನಾವಣಾಧಿಕಾರಿಗಳ ನೇಮಕ:
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಸಂಡೂರುಗೆ ಜಿಪಂನ ಉಪಕಾರ್ಯದರ್ಶಿ ಶರಣಬಸವರಾಜ, ಸಿರುಗುಪ್ಪಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್ ಹಾಗೂ ಕಂಪ್ಲಿಗೆ ವಿಮ್ಸ್‍ನ ಮುಖ್ಯಾಧಿಕಾರಿ ಡಾ.ನಯನ ಅವರನ್ನು ನೇಮಕ ಮಾಡಲಾಗಿದೆ.
ಕ್ಷೇತ್ರ ಮತ್ತು ಮತದಾರರು:
ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಮತಕ್ಷೇತ್ರಗಳಿದ್ದು, ಅದರಲ್ಲಿ 4 (91-ಕಂಪ್ಲಿ, 92-ಸಿರುಗುಪ್ಪ, 93-ಬಳ್ಳಾರಿ ಗ್ರಾಮೀಣ ಹಾಗೂ 95-ಸಂಡೂರು) ಪರಿಶಿಷ್ಟ ಪಂಗಡ ಮೀಸಲು ಮತಕ್ಷೇತ್ರಗಳಿದ್ದು, 94-ಬಳ್ಳಾರಿ ನಗರ ಕ್ಷೇತ್ರವು ಇತರೆ ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ 5,61,718 ಪುರುಷ ಮತದಾರರು, 5,79,012 ಮಹಿಳಾ ಮತದಾರರು, 169 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 11,40,899 ಮತದಾರರು ಇದ್ದಾರೆ. ಜಿಲ್ಲೆಯ ಒಟ್ಟು ಚುನಾವಣಾ ಜನಸಂಖ್ಯೆ ಸರಾಸರಿಗೆ ಶೇ.63.46ರಷ್ಟು ಮತದಾರರು ಇದ್ದಾರೆ. ಇದು ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆಯು ಜಾರಿಯಲ್ಲಿದ್ದು, ಹೊಸದಾಗಿ ನೊಂದಾಯಿಸಬೇಕಾದ ಮತದಾರರಿಗೆ ಎಪ್ರೀಲ್ 11 ರವರೆಗೆ ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಅರ್ಹರಿರುವರು ನಿಗದಿಪಡಿಸಿದ ಕಾಲ ಮಿತಿಯೊಳಗೆ ಅಂತರ್ಜಾಲದಲ್ಲಿ ತಮ್ಮ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಮತದಾನ ಹಕ್ಕನ್ನು ಚಲಾಯಿಸಿ ಸುಭದ್ರವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸಾರ್ವಜನಿಕರು ಪಾತ್ರವಹಿಸಬೇಕು ಎಂದು ಹೇಳಿದರು.
ಯುವ ಮತದಾರರಲ್ಲಿ ಪ್ರಥಮ ಜಿಲ್ಲೆ:
ಜಿಲ್ಲೆಯಲ್ಲಿ ಈ ಬಾರಿ 34,265 ಯುವ ಮತದಾರರು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯು ಅತಿಹೆಚ್ಚು ಯುವ ಮತದಾರರನ್ನು ನೋಂದಾಯಿಸಿದ ಪ್ರಥಮ ಜಿಲ್ಲೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1191 ಚುನಾವಣಾ ಮತಗಟ್ಟೆಗಳಿವೆ. ಚುನಾವಣಾ ಆಯೋಗವು ಸಹ ಹೊಸ ಮತಯಂತ್ರಗಳ ಬಳಕೆಗೆ ಸಜ್ಜಾಗಿದೆ. ಹೈದರಾಬಾದ್ ಮೂಲದ ಇಸಿಐಎಲ್ (ಎಲೆಕ್ಟ್ರಾನಿಕ್ ಕಾಪೆರ್Çೀರೇಷನ್ ಇಂಡಿಯಾ ಲಿಮಿಟೆಡ್) ಹೊಸ ಮತ ಯಂತ್ರಗಳನ್ನು ತಯಾರಿಸಿದೆ. ಜಿಲ್ಲೆಯ ಮತಗಟ್ಟೆಗಳಿಗೆ ಅವಶ್ಯವಿರುವ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳು ಸರಬರಾಜು ಆಗಿದ್ದು, ಇ.ವಿ.ಎಂ.ಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ತಂತ್ರಜ್ಞರಿಂದ ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಪ್ರಥಮ ಹಂತದ ಪರಿಶೀಲನಾ ಕಾರ್ಯವನ್ನು ಮಾಡಲಾಗಿದೆ. ಈ ನೂತನ ಮತ ಯಂತ್ರಗಳಲ್ಲಿ ಮತದಾರರು ಮತ ಚಲಾಯಿಸಿದಾಗ ಅಭ್ಯರ್ಥಿಯ ಛಾಯಾಚಿತ್ರ ಗೋಚರಿಸಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 16,827 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು ಮತ್ತು 14, 871 ಜನ ವಿಶೇಷ ಚೇತನ ಮತದಾರರಿದ್ದಾರೆ. ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ವಿಶೇಷ ಚೇತನರು ಮತದಾನದಿಂದ ಹೊರಗುಳಿಯಬಾರದೆಂದು ಮನೆಯಿಂದಲೇ ಮತದಾನ ಮಾಡಲು ಅಂಚೆ ಮತದಾನವನ್ನು ಇದೇ ಮೊದಲ ಬಾರಿ ಪರಿಚಯಿಸಿದೆ. ಈ ಮೂಲಕ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದ ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟ ವಯಸ್ಕರು ಅಗತ್ಯ ದಾಖಲೆ ನೀಡಿ ಧೃಢೀಕರಣದೊಂದಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 5 ಮತಕ್ಷೇತ್ರಗಳಿಗೆ ಜಿಲ್ಲೆಯಾದ್ಯಂತ ಒಟ್ಟು 24 ಚೆಕ್‍ಪೆÇೀಸ್ಟ್ ಸ್ಥಾಪಿಸಲಾಗಿರುತ್ತದೆ. ಪ್ರತಿ ಚೆಕ್‍ಪೆÇೀಸ್ಟ್‍ನಲ್ಲಿ 3 ಎಸ್‍ಎಸ್‍ಟಿ ಅಧಿಕಾರಿಗಳು ಹಾಗೂ ಪೆÇಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ವಿಡಿಯೋ ಕಣ್ಗಾವಲು ತಂಡಗಳನ್ನೂ ಕೂಡ ನೇಮಕ ಮಾಡಲಾಗಿದೆ.
ಸಿ.ವಿಸಲ್ ಆಪ್ ಬಳಸಿ:
ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಜರುಗುವಲ್ಲಿ ಪ್ರತಿಯೊಬ್ಬ ನಾಗರಿಕರು ಸಿ.ವಿಸಲ್ ಆಪ್ ಬಳಸಿ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳನ್ನು ಇದರಲ್ಲಿ ದಾಖಲಿಸಬಹುದಾಗಿದೆ. ಪ್ರತಿಯೊಬ್ಬರೂ ಯಾವುದೇ ಆತಂಕವಿಲ್ಲದೇ ಈ ಆಪ್ ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದ ಅವರು ಎಲ್ಲಾ ರಾಜಕೀಯ ಪಕ್ಷದವರು ಹಾಗೂ ಅಧಿಕಾರಿ ವರ್ಗದವರು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕಾನೂರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
-----
ವ್ಯಕ್ತಿ ಕಾಣೆ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ನಗರದ ಸಿರುಗುಪ್ಪ ರಸ್ತೆಯ ಬಸ್ ಸ್ಟ್ಯಾಂಡ್ ಪಕ್ಕದ ನಿವಾಸಿ ವೀರೇಶ್ ಪಿ.ವೈ ಎನ್ನುವ 38 ವರ್ಷದ ವ್ಯಕ್ತಿಯು ಮಾ.23ರಂದು ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ ಗುರುತು: 5.7 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, ಹಸಿರು ಬಣ್ಣದ ಟೀ ಶರ್ಟ್, ಗ್ರೇ ಕಲರ್ ಜೀನ್ಸ್ ಪ್ಯಾಂಟ್ ಹಾಗೂ ಕನ್ನಡಕ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಕೌಲ್ ಬಜಾರ್ ಠಾಣೆಯ ಪಿಐ ಮೊ.9480803047, ಪಿಎಸ್‍ಐ ಮೊ.94808203085 ಗೆ ಸಂಪರ್ಕಿಸಬಹುದಾಗಿದೆ
------
ಕುಡತಿನಿ: ಆಸ್ತಿ ತೆರಿಗೆ ಪರಿಷ್ಕರಣೆ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಕುಡುತಿನಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸಭೆಯ ನಿರೀಕ್ಷಣೆ ಮೇರೆಗೆ 2023-24 ನೇ ಸಾಲಿಗೆ ಶೇ.3 ರಷ್ಟು ತೆರಿಗೆಯನ್ನು ಹೆಚ್ಚುವರಿ ಮಾಡಲು ಅನುಮೋದಿಸಿದ್ದು, 2023-24 ನೇ ಸಾಲಿಗೆ ಶೇ.3 ರಷ್ಟು ಹೆಚ್ಚಾಗಿ ಪರಿಷ್ಕರಣೆ ಮಾಡಲಾಗಿರುತ್ತದೆ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ತಿಳಿಸಿದ್ದಾರೆ.
2023-24 ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರಸೂಚಿಗಳು ಪರಿಷ್ಕರಣೆಯಾಗದಿದ್ದಲ್ಲಿ ಶೇ.3ರಿಂದ ಶೇ.5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕಕರಣೆ ಮಾಡಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿರುತ್ತಾರೆ. ಇದರನ್ವಯ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
-----
ಯುವ ಸಂವಾದ್ ಕಾರ್ಯಕ್ರಮ: ಅರ್ಜಿ ಆಹ್ವಾನ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ವಾಯತ್ತ ಸಂಸ್ಥೆ ನೆಹರು ಯುವ ಕೇಂದ್ರದಿಂದ ಏಪ್ರೀಲ್ 1 ರಿಂದ ಮೇ 31 ರವರೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಯುವ ಸಂವಾದ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಜಿಲ್ಲಾ ನೆಹರು ಯುವ ಕೇಂದ್ರದಿಂದ ಜಿಲ್ಲೆಯ ವಿವಿಧ ಎಲ್ಲಾ ಸಮುದಾಯ ಆಧಾರಿತ ಸಂಸ್ಥೆಗಳ ಸಹಕಾರ ಮತ್ತು ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಅರ್ಹ ಸಮುದಾಯ ಆಧಾರಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಸಂಸ್ಥೆಗಳು ರಾಜಕೀಯೇತರ, ಪಕ್ಷಾತೀತವಾಗಿ ಹಿನ್ನಲೆ ಹೊಂದಿರುವ ಮತ್ತು ಯುವ ಸಂವಾದ್ ಕಾರ್ಯಕ್ರಮವನ್ನು ನಡೆಸಲು ಸಾಕಷ್ಟು ಸಾಂಸ್ಥಿಕ ಶಕ್ತಿಯನ್ನು ಹೊಂದಿರಬೇಕು. ಸಂಸ್ಥೆಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರಬಾರದು. ಕಾರ್ಯಕ್ರಮಗಳ ಸಂಘಟನೆಗಾಗಿ ಪ್ರತಿ ಜಿಲ್ಲೆಗೆ 3 ಸಮುದಾಯ ಆಧಾರಿತ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಸಂಸ್ಥೆಗಳು ಅರ್ಜಿಗಳನ್ನು ಜಿಲ್ಲಾ ನೆಹರು ಯುವ ಕೇಂದ್ರದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರ ಕಚೇರಿ ಅಥವಾ ದೂ.08392-276839 ಗೆ ಸಂಪಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ತಿಳಿಸಿದ್ದಾರೆ.
------
ಮಹಾತ್ಮಗಾಂಧಿ ನರೇಗಾ ಕೂಲಿ; ಏ.1ರಿಂದ 316 ರೂ.ಗೆ ಹೆಚ್ಚಳ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ವರ್ಷದಲ್ಲಿ ನೀಡುತ್ತಿರುವ ಕೂಲಿ ರೂ.309 ಗಳಿಂದ ರೂ.316 ಗಳಿಗೆ ಪರಿಷ್ಕರಿಸಿ 2023-24ನೇ ಸಾಲಿಗೆ ಆರ್ಥಿಕ ವರ್ಷ ಏಪ್ರೀಲ್ 1 ರಿಂದ ಅನ್ವಯವಾಗುವಂತೆ ಪಾವತಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೂಲಿ ಕೆಲಸ ನೀಡಲಾಗುವುದು ಮತ್ತು ಜನರು ವಲಸೆ ಹೋಗುವುದನ್ನು ತಡೆಗಟ್ಟಲು ಗ್ರಾಮದ ಬಡ ಕೂಲಿ ಕಾರ್ಮಿಕರು ನಮೂನೆ-6 ರಲ್ಲಿ ಅರ್ಜಿಯನ್ನು ಗ್ರಾಮಪಂಚಾಯಿತಿಗೆ ಸಲ್ಲಿಸಿ, ಕೂಲಿ ಕೆಲಸವನ್ನು ತಮ್ಮ ಗ್ರಾಮದಲ್ಲಿಯೇ ಪಡೆದುಕೊಳ್ಳಬಹುದಾಗಿದೆ.
*ದೊರಕುವ ಸೌಲಭ್ಯಗಳು:* ನಮೂನೆ-1ರಲ್ಲಿ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಉದ್ಯೋಗ ಚೀಟಿಗೆ ಅಜಿ ಸಲ್ಲಿಸಬೇಕು. ಅಜಿ ಜೊತೆಗೆ ಪಾಸ್‍ಪೆÇೀರ್ಟ್ ಅಳತೆಯ ಫೋಟೋ, ಆಧಾರ್‍ಕಾರ್ಡ್, ರೇಷನ್‍ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ರಾಮ ಪಂಚಾಯತಿಗೆ ನೀಡಿ, ಉದ್ಯೋಗ ಚೀಟಿಯನ್ನು ಪಡೆದುಕೊಳ್ಳಬಹುದು. ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇರುತ್ತದೆ. ಕಾಮಗಾರಿ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭೀಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯವರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಿದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇದೆ. ಯೋಜನೆಯ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡಲು ಈಗಾಗಲೇ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
--------
ಬೇಸಿಗೆ ತರಬೇತಿ ಶಿಬಿರ ಏ.1ರಿಂದ ಪ್ರಾರಂಭ; ನೊಂದಣಿಗೆ ಆಹ್ವಾನ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ನಲ್ಲಚೇರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಈಜುಕೊಳದಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಏಪ್ರೀಲ್ 1 ರಿಂದ ಆರಂಭವಾಗಲಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದು.
*ಈಜುಕೊಳ ಶಿಬಿರ:* ಈಜುಕೊಳ ಶಿಬಿರಕ್ಕೆ 21 ದಿನಗಳಂತೆ ಮೂರು ಶಿಬಿರಗಳು ನಡೆಯುತ್ತಿದ್ದು, ಒಬ್ಬರಿಗೆ ಶುಲ್ಕ ರೂ.1300 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಒಂದನೇ ಶಿಬಿರವು ಏ.1 ರಿಂದ 21 ರವರೆಗೆ, ಎರಡನೇ ಶಿಬಿರವು ಏ.23 ರಿಂದ ಮೇ 14 ರವರೆಗೆ, ಮೂರನೇ ಶಿಬಿರವು ಮೇ 16 ರಿಂದ ಜೂನ್ 4 ರವರೆಗೆ ನಡೆಯಲಿವೆ. ಸಮಯವು ಸೋಮವಾರ ರಜೆಯನ್ನು ಹೊರತುಪಡಿಸಿ ಮಂಗಳವಾರದಿಂದ ಭಾನುವಾರದವರೆಗೆ ಬ್ಯಾಚ್ ವಾರು ಬೆಳಗ್ಗೆ 9ರಿಂದ 10, 10ರಿಂದ 11, 11ರಿಂದ 12 ರವರಿಗೆ ನಡೆಯಲಿವೆ ಹಾಗೂ ಮಹಿಳಾ ಬ್ಯಾಚ್ ಬೆಳಗ್ಗೆ 8 ರಿಂದ 9 ಮತ್ತು ಸಂಜೆ 5 ರಿಂದ 6 ರವರೆಗೆ ನಡೆಯಲಿವೆ.
*ಬ್ಯಾಡ್ಮಿಂಟನ್:* ಬ್ಯಾಡ್ಮಿಂಟನ್ ಶಿಬಿರವು 21 ದಿನಗಳಂತೆ ಎರಡು ಶಿಬಿರಗಳಲ್ಲಿ ಏ.1 ರಿಂದ 21 ರವರೆಗೆ ಮತ್ತು ಮೇ 1 ರಿಂದ 21 ರವರೆಗೆ ನಡೆಯಲಿವೆ. ಒಬ್ಬರಿಗೆ ಶುಲ್ಕ ರೂ.1850 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಸಮಯ ಮಂಗಳವಾರದಿಂದ ಭಾನುವಾರದವರೆಗೆ (ಸೋಮವಾರ ರಜೆ) ನಡೆಯಲಿದ್ದು, ಬ್ಯಾಚ್ ವಾರು ಆಯಾ ಸಮಯದಲ್ಲಿ ಪ್ರಾರಂಭವಾಗಲಿವೆ.
ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಮೊ.7899935141, 8880999815, 9739852460 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್ ಅವರು ತಿಳಿಸಿದ್ದಾರೆ.
-------
ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ರಜೆಯ ಮೇಲೆ ತೆರಳದಂತೆ ನಿರ್ಬಂಧ: ಡಿಸಿ ಪವನ್‍ಕುಮಾರ್ ಮಾಲಪಾಟಿ
ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ವೇಳಾ ಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ತಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಕ್ರಿಯರಾಗಿರುವಂತೆ ಮತ್ತು ತಮ್ಮ ಅಧೀನದಲ್ಲಿ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಜೆಯನ್ನು ಮಂಜೂರು ಮಾಡುವಂತಿಲ್ಲ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
-------
ಮಂಗಳವಾರ, ಮಾರ್ಚ್ 28, 2023
ಸುತ್ತೂರು ಜೆಎಸ್‍ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಸುತ್ತೂರು ಶ್ರೀಕ್ಷೇತ್ರದ ಜೆಎಸ್‍ಎಸ್ ಶಾಲೆಗೆ ಮತ್ತು ಉಚಿತ ವಿದ್ಯಾರ್ಥಿ ನಿಲಯದ 2023-24ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಮಾಧ್ಯಮಕ್ಕೆ 1 ರಿಂದ 8ನೇ ತರಗತಿವರೆಗೆ ಮತ್ತು ಇಂಗ್ಲೀಷ್ ಮಾಧ್ಯಮಕ್ಕೆ 1, 2, 5 ಹಾಗೂ 8ನೇ ತರಗತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ನೀಡಲಾಗುವುದು.
ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಖುದ್ದಾಗಿ ಪಡೆಯಬಹುದು ಅಥವಾ www.jssschoolsuttur.org ಹಾಗೂ www.jssonline.org ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ದೂರವಾಣಿಯಲ್ಲಿ ಸಂಪರ್ಕಿಸಿದರೆ ವ್ಯಾಟ್ಸ್‍ಪ್ ಮೂಲಕವೂ ಅರ್ಜಿ ನಮೂನೆಯನ್ನು ಕಳುಹಿಸಿಕೊಡಲಾಗುವುದು. ಅಂಚೆ ಮುಖಾಂತರ ಅರ್ಜಿ ಪಡೆಯಲು ಇಚ್ಛಿಸುವವರು, ವಿದ್ಯಾರ್ಥಿಯು ಪ್ರವೇಶ ಬಯಸುವ ತರಗತಿಯ ವಿವರ ಹಾಗೂ ಸ್ವ-ವಿಳಾಸವುಳ್ಳ 5 ರೂ.ಗಳ ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಮೇ 13 ರೊಳಗಾಗಿ ಸಲ್ಲಿಸಬೇಕು.
ಅರ್ಜಿಯ ಜೊತೆಗೆ ಹಿಂದಿನ ತರಗತಿಯ ಅಂಕಪಟ್ಟಿ, ಭಾವಚಿತ್ರ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್‍ಕಾರ್ಡ್, ರೇಷನ್‍ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅಂಚೆ ಮುಖಾಂತರ ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.7411486938 (ವ್ಯಾಟ್ಸ್‍ಪ್ ನಂ), ಹಿರಿಯ ಪ್ರಾಥಮಿಕ ಶಾಲೆ ದೂ.08221-232054, ಪ್ರೌಢಶಾಲೆ ದೂ.08221-232653, ಬಸವೇಶ್ವರ ವಿದ್ಯಾರ್ಥಿನಿಲಯ ದೂ.08221-232332, ಸಂಯೋಜನಾಧಿಕಾರಿಗಳ ಕಚೇರಿ ದೂ.08221-232217 ಗೆ ಸಂಪರ್ಕಿಸಿ ವಿವರ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಮಕ್ಕಳನ್ನು ಚುನಾವಣಾ ಕಾರ್ಯ, ಪ್ರಚಾರ ಕಾರ್ಯಗಳಲ್ಲಿ ಬಳಸಿಕೊಳ್ಳದಂತೆ ಡಿಸಿ ಪವನ್‍ಕುಮಾರ್ ಮಾಲಪಾಟಿ ಆದೇಶ
ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಭಾರತ ಸರ್ಕಾರವು ವಿಶ್ವಸಂಸ್ಥೆಯು ಅನುಮೋದಿತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಂಬಂಧಿಸಿದಂತೆ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಚುನಾವಣಾ ಕಾರ್ಯಗಳಲ್ಲಿ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೋರಿದ್ದು, ಒಂದು ವೇಳೆ ಚುನಾವಣಾ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
-------
ಜಿಲ್ಲಾಡಳಿತದಿಂದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಸಾಂಕೇತಿಕ ಆಚರಣೆ
ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಅಗ್ನಿಬನ್ನಿರಾಯಸ್ವಾಮಿ ಜಯಂತಿಯನ್ನು ಮಂಗಳವಾರ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‍ಬಾಬು ಅವರು ಅಗ್ನಿಬನ್ನಿರಾಯಸ್ವಾಮಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನ ಸಲ್ಲಿಸಿ ಜಯಂತಿಯ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು.
-----
ಕಂಪ್ಲಿ: ಆಸ್ತಿ ತೆರಿಗೆ ಪರಿಷ್ಕರಣೆ
ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಪ್ರದೇಶವಾರು ಆಸ್ತಿ ತೆರಿಗೆ ವಿಧಿಸಿ ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ 2023-24ನೇ ಸಾಲಿಗೆ 2022-23ರ ಸಾಲಿನ ಆಸ್ತಿ ತೆರಿಗೆಗೆ ಶೇ.3ರಂತೆ ಹೆಚ್ಚಿಸಿ ಆಸ್ತಿ ತೆರಿಗೆ ದರ ಪರಿಷ್ಕರಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶಿವಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಸೋಮವಾರ, ಮಾರ್ಚ್ 27, 2023
ಮಹಿಳೆ ಕಾಣೆ
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಗಜಗಿನಾಳ್ ಗ್ರಾಮದ ನಿವಾಸಿ ತಾಯಮ್ಮ ಎನ್ನುವ 30 ವರ್ಷದ ಮಹಿಳೆ ಮಾ.24 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.
ಚಹರೆ ಗುರುತು: 5.2 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಬಿಳಿ ಬಣ್ಣದ ಡಿಸೈನ್ ಇರುವ ಗ್ರೇಕಲರಿನ ಸೀರೆ ಮತ್ತು ಕೆಂಪು ಬಣ್ಣದ ಕುಬುಸ ಧರಿಸಿರುತ್ತಾಳೆÉ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ದೂ. 08396-220333, ಸಿರುಗುಪ್ಪ ವೃತ್ತ ಸಿ.ಪಿ.ಐ ದೂ. 08396-220003, ಸಿರುಗುಪ್ಪ ಡಿ.ಎಸ್.ಪಿ. ದೂ. 08392-276000, ಬಳ್ಳಾರಿ ಎಸ್.ಪಿ. ದೂ. 08932-258400 ಗೆ ಸಂಪರ್ಕಿಸಬಹುದಾಗಿದೆ.
-------
ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಮಾ.28ರಂದು
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಮಾ.28ರಂದು ಬೆಳಗ್ಗೆ 10ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಲಾಗಿದೆ.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಕಾರ್ಯಕ್ರಮ ಉದ್ಘಾಟನೆ ಮಾಡುವರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್ ಅವರು ಭಾಗವಹಿಸುವರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್.ಎನ್ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ.
-----
ಮದ್ಯ ಸಾಗಾಣಿಕೆ: ವ್ಯಕ್ತಿಯ ಬಂಧನ
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಕುರುಗೋಡು ತಾಲೂಕಿನ ಯರ್ರಂಗಳಿಗಿ ಗ್ರಾಮದಿಂದ ವದ್ದಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬರುವ ಗೋಡಾನ್ ಹತ್ತಿರ ಶೋಧನೆ ಮಾಡುತ್ತಿರುವ ಸಮಯದಲ್ಲಿ ತಿಮ್ಮಪ್ಪ ಎನ್ನುವ ವ್ಯಕ್ತಿ ಒಟ್ಟು 17.280 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಪೆಟ್ರೋಲ್ ಬಂಕ್, ಆಭರಣ ಅಂಗಡಿ ಮಾಲೀಕರೊಂದಿಗೆ ಸಭೆ
ಶಾಂತಯುತ ಸಾರ್ವತ್ರಿಕ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಿ: ಎಡಿಸಿ ಮೊಹಮ್ಮದ್ ಝುಬೇರಾ
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂಬಂಧ ಮತದಾರರನ್ನು ಸೆಳೆಯಲು ಆಭರಣ, ಇತರೆ ಉಡುಗೊರೆ ನೀಡುತ್ತಿದ್ದಲ್ಲಿ ಮತ್ತು ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಪೆಟ್ರೋಲ್ ಬಂಕ್ ಹಾಗೂ ಆಭರಣ ಅಂಗಡಿ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರದ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಕಟ್ಟು ನಿಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತವು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಚುನಾವಣೆ ಪ್ರಚಾರ ಕಾರ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅನಧೀಕೃತವಾಗಿ ಬಳಸದಂತೆ ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಅತೀ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಮಾಡಿಕೊಂಡಲ್ಲಿ ಹಿಂದಿನ ಮೂರು ತಿಂಗಳ ಸರಬರಾಜು ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಆಕರ್ಷಕ ಆಭರಣಗಳನ್ನು (ನಾಣ್ಯದ ರೂಪದ) ಮತ್ತು ಉಡುಗೊರೆಗಳ ಮೂಲಕ ಮತದಾರರನ್ನು ಸೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಆಭರಣ ಅಂಗಡಿಗಳ ಮಾಲೀಕರು ಯಾವುದೇ ರೀತಿಯ ಅಸ್ಪದ ನೀಡಬಾರದು ಎಂದರು.
ಒಂದೇ ಸಮಯದಲ್ಲಿ ಅತೀ ಹೆಚ್ಚು ಆಭರಣಗಳನ್ನು ಖರೀದಿಸಿದರೆ ಅಂತಹವರ ಮಾಹಿತಿ ಅಂಗಡಿಗಳ ಮಾಲೀಕರು ದಾಖಲಿಸಿಕೊಳ್ಳಬೇಕು. ದಾಖಲೆಗಳಿಲ್ಲದ ಆಭರಣ ಮತ್ತು ಇತರೆ ಉಡುಗೊರೆಗಳನ್ನು ಸಂಚರಿಸುವ ಸಮಯದಲ್ಲಿ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರು, ಚುನಾವಣಾ ಸಿಬ್ಬಂದಿಗಳು ಹಾಗೂ ಇತರರು ಇದ್ದರು.
--------
ಮಹಿಳೆಯರ ಆರೋಗ್ಯ ಕಾಳಜಿಗಾಗಿ ಆಯುಷ್ಮತಿ ಕ್ಲಿನಿಕ್ ಆರಂಭ
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲೆಯ ನಗರ ಪ್ರದೇಶದ ಕೊಳಚೆ ಪ್ರದೇಶಗಳ ವ್ಯಾಪ್ತಿಯ ಗರ್ಭಿಣಿ ತಾಯಂದಿರಿಗೆ ನುರಿತ ಪ್ರಸೂತಿ ತಜ್ಞರಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮಹತ್ವಾಕಾಂಕ್ಷಿ ಯೋಜನೆಯಾಗಿ ಜಾರಿಗೆ ತಂದಿರುವ ಆಯುಷ್ಮತಿ ಕ್ಲಿನಿಕ್‍ಗಳು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಎರಡು ಕಡೆ ಸೋಮವಾರ ಚಾಲನೆಗೊಂಡಿವೆ.
ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಕಷ್ಟಪಟ್ಟು ದುಡಿದು ಜೀವನ ನಡೆಸುವ ಕೊಳಚೆ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯರ ಕಾಳಜಿಗಾಗಿ ಆರಂಭವಾದ ಈ ಯೋಜನೆಯು ಅತ್ಯಂತ ಸೂಕ್ತವಾಗಿದೆ ಎಂದರು.
ಸಾರ್ವಜನಿಕರು ತಮ್ಮ ಕುಟುಂಬ ಗರ್ಭಿಣಿ ಮಹಿಳೆಯರನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸುವ ಮೂಲಕ ಹೆರಿಗೆ ಅವಧಿಯಲ್ಲಿ ಯಾವುದೇ ತೊಡಕುಗಳಿಲ್ಲದಂತೆ ಚಿಕಿತ್ಸೆ ನೀಡುವ ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆಯಿರಿ ಎಂದು ತಿಳಿಸಿದರು.
ಕೌಲಬಜಾರ್ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಬಿ.ಮುಬೀನ್ ರವರು ಚಾಲನೆ ನೀಡಿ, ನೂರಾರು ರೂಪಾಯಿಗಳನ್ನು ಖರ್ಚು ಮಾಡಿ ಪ್ರಸೂತಿ ವೈದ್ಯರ ಬಳಿ ತಪಾಸಣೆಗೆ ತೆರಳಿ ಹಣ ಖರ್ಚು ಮಾಡಲಾಗುತ್ತಿತ್ತು. ಈ ಹಣ ಉಳಿಸಲು ಆಯುಷ್ಮತಿ ಕ್ಲಿನಿಕ್ ತುಂಬಾ ಸಹಾಯಕವಾಗುತ್ತದೆ ಎಂದರು.
ಬಡವರಿಗೆ ಸರ್ಕಾರದ ಆಯುಷ್ಮತಿ ಯೋಜನೆ ಸದುಪಯೋಗವಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿನ ಗರ್ಭಿಣಿ ಮಹಿಳೆಯರನ್ನು ಆಯುಷ್ಮತಿ ಕ್ಲಿನಿಕ್‍ನಲ್ಲಿ ಪರೀಕ್ಷೆ ಮಾಡಿಸುವ ಮೂಲಕ ತಾಯಿ ಮಗುವಿನ ಆರೋಗ್ಯಕ್ಕೆ ಗಮನ ನೀಡಲು ಮುಂದೆಬನ್ನಿ ಎಂದು ತಿಳಿಸಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್‍ಕುಮಾರ ಮಾತನಾಡಿ, ರಾಜ್ಯದಲ್ಲಿ ಒಟ್ಟು 95 ಆಯುಷ್ಮತಿ ಕ್ಲಿನಿಕ್‍ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ವರ್ಚುವಲ್ ಮೂಲಕ ಬೆಂಗಳೂರಿನಿಂದ ಉದ್ಘಾಟನೆಯನ್ನು ಮಾಡಿರುತ್ತಾರೆ.
ಜಿಲ್ಲೆಯ ಎರಡು ಆಯುಷ್ಮತಿ ಕ್ಲಿನಿಕ್‍ಗಳನ್ನು ಸ್ಥಳೀಯ ಹಂತದಲ್ಲಿ ಸಂಬಂಧಿತ ವಾರ್ಡ್ ಸದಸ್ಯರು ಚಾಲನೆಗೊಳಿಸಿದ್ದಾರೆ. ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಪ್ರಾರಂಭಿಸಲಾಗುತ್ತಿದ್ದು, ಸ್ವಾಸ್ಥ್ಯ ಮಹಿಳೆಯರು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ಸೋಮವಾರ ಫಿಜಿಷಿಯನ್, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ-ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ-ಮಕ್ಕಳ ತಜ್ಞರು, ಶುಕ್ರವಾರ-ಸ್ತ್ರೀರೋಗ ತಜ್ಞರು, ಶನಿವಾರ- ಇತರೆ ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ ತಜ್ಞರು ಸೇವೆ ನೀಡುತ್ತಾರೆ. ಮಹಿಳೆಯರಿಗೋಸ್ಕರ ರೂಪಗೊಂಡ ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ಆಪ್ತಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಾಗಲಿವೆ. ಆಯುಷ್ಮತಿ ಕ್ಲಿನಿಕ್‍ಗೆ ಮಹಿಳೆಯರು ಭೇಟಿನೀಡಿ ತಜ್ಞ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ, ಮುಖಂಡರಾದ ಗೌಸ್, ವೈಧ್ಯಾಧಿಕಾರಿಗಳಾದ ಡಾ.ಹನುಮಂತಪ್ಪ, ಡಾ.ಸುರೇಖ, ಡಾ.ಸೈಯದ್ ಖಾದ್ರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಸುರೇಶ ಸೇರಿದಂತೆ ಸ್ಥಳೀಯರಾದ ನರೇಶ, ಅನ್ವರ್‍ಬಾಷಾ, ಸಮೀರ್, ಹಾಪೀಜ್, ಅದಮ್‍ಸಾಬ್ರಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
-----
ಸ್ವಾತಂತ್ರ್ಯ ಹೋರಾಟಗಾರ ಟೇಕೂರ್ ಸುಬ್ರಮಣ್ಯ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾ.29ರಂದು
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಭಾರತ ಅಂಚೆ ಇಲಾಖೆಯು ಬಳ್ಳಾರಿಯ ಜಿಲ್ಲೆಯ ಅಪ್ರತಿಮ ಸ್ವತಂತ್ರ ಹೋರಾಟಗಾರ, ಗಾಂಧಿವಾದಿ ಹಾಗೂ ಅವಿಭಜಿತ ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಟೇಕೂರ್ ಸುಬ್ರಮಣ್ಯರ ಕುರಿತ ವಿಶೇಷ ಅಂಚೆ ಲಕೋಟೆಯನ್ನು ಮಾ.29ರಂದು ಬೆಳಗ್ಗೆ 10.30 ಕ್ಕೆ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಅಂಚೆ ಅಧೀಕ್ಷಕ ವಿ.ಎಲ್.ಚಿತ್ತಕೋಟೆ ಅವರು ಬಿಡುಗಡೆ ಮಾಡುವರು.
ಗಾಂಧಿ ಭವನದ ಕಾರ್ಯದರ್ಶಿ ಟಿ.ಜಿ.ವಿಠಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಹೊನ್ನುರ್ ಅಲಿ, ಮಾಜಿ ವಿಮ್ಸ್ ನಿರ್ದೇಶಕರಾದ ಡಾ.ಟೇಕೂರ್ ರಾಮನಾಥ್ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದು ಬಳ್ಳಾರಿ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
------
ಜಿಲ್ಲೆಯ ಕ್ರೆಡಿಟ್ ಯೋಜನೆಯು ಶೇ.10.17ರಷ್ಟು ಹೆಚ್ಚಳ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು
ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲೆಯ 2023-24 ನೇ ಸಾಲಿನ ಜಿಲ್ಲಾ ಕ್ರೇಡಿಟ್ ಯೋಜನೆ 9,500 ಕೋಟಿಗಳ ಗುರಿ ಇದ್ದು, ಕಳೆದ ವರ್ಷದ ಹಂಚಿಕೆಗಿಂತ ಶೇ.10.17 ರಷ್ಟು ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ವಲಯಗಳ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಒಟ್ಟು ಗುರಿ 2889.36 ಕೋಟಿಗಳಿದ್ದು, ಇದು ಒಟ್ಟು ಜಿಲ್ಲೆಯ ಕ್ರೇಡಿಟ್ ಯೋಜನೆಯ ಶೇ.30.41 ನಷ್ಟಿದೆ. ಜಿಲ್ಲೆಯ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ಎಮ್‍ಎಸ್‍ಇಎಮ್ ವಲಯಕ್ಕೆ 1851.24 ಕೋಟಿಗಳನ್ನು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್‍ಗಳು ಮತ್ತು ಸರ್ಕಾರ ವಿಭಾಗಗಳ ನಡುವೆ ಉತ್ತಮ ಸಹಕಾರ ಮತ್ತು ಸಮನ್ವಯದೊಂದಿಗೆ ಇಲಾಖೆಗಳು ಕಾರ್ಯ ನಿರ್ವಹಿಸಿದರೆ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ತೋರುವುದು ಕಷ್ಟವೇನಲ್ಲ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಣ ಕ್ಷೇತ್ರಕ್ಕೆ 45.72 ಕೋಟಿ, ವಸತಿ ಕ್ಷೇತ್ರಕ್ಕೆ 238.44 ಕೋಟಿ ಮೀಸಲಿರಿಸಲಾಗಿದ್ದು, ರಫ್ತು ಸಾಲ, ಸಾಮಾಜಿಕ ಮೂಲ ಸೌಕರ್ಯ ಇತ್ಯಾದಿಗಳನ್ನು ಹೆಚ್ಚಿಸಲು ಇತರೆ ವಲಯಕ್ಕೆ 142.54 ಕೋಟಿಗಳ ವಿತರಣಾ ಗುರಿ ಇದ್ದು, ಆದ್ಯತಾ ವಲಯಕ್ಕೆ 5240.06 ಕೋಟಿಗಳ ವಿತರಣಾ ಗುರಿಯನ್ನು ನಿಗದಿಪಡಿಸಲಾಗಿದೆ. ಇನ್ನುಳಿದ ಗುರಿಯನ್ನು ಆದ್ಯತೆಗಳಿಲ್ಲದ ವಲಯಕ್ಕೆ ನಿಗದಿಪಡಿಸಿದೆ. ಇದು ಒಟ್ಟು ಜಿಲ್ಲಾ ಕ್ರೇಡಿಟ್ ಯೋಜನೆಯ ಶೇ.5.16 ನಷ್ಠಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳಾದ ಪಿಎಮ್‍ಇಜಿಪಿ, ಪಿಎಮ್‍ಎಫ್‍ಇ, ಎನ್‍ಆರ್‍ಎಲ್‍ಎಮ್, ಎಸ್‍ಎಸ್‍ವೈ, ಆರ್ಟೀಸಾನ್ ಸ್ಕೀಮ್ ಮುಂತಾದ ವಿವಿದ ಸರ್ಕಾರಿ ಪ್ರಯೋಜಿತ ಯೋಜನೆಗಳ ಸಮರ್ಪಕ ಅನುμÁ್ಠದ ಕುರಿತು ಚರ್ಚಿಸಿದರು.
ಕೆನೆರಾ ಬ್ಯಾಂಕ್ ವಿವಿಧ ಲೀಡ್ ಬ್ಯಾಂಕ್ ಯೋಜನೆಗಳ ಅಡಿಯಲ್ಲಿ ಅಜೆಂಡಾವಾರು ಪ್ರಗತಿಯನ್ನು ಪ್ರಸ್ತುತ ಪಡಿಸಿದರು.
ಸಭೆಯಲ್ಲಿ ಬೆಂಗಳೂರು ಆರ್‍ಬಿಐ ಎಫ್‍ಐಡಿಡಿ ವಿಭಾಗದ ಎಜಿಮ್, ಪಿ.ಬಿಸ್ವಾಸ್, ನಬಾರ್ಡ್‍ನ ಡಿಡಿಎಂ ಯುವರಾಜ್‍ಕುಮಾರ್, ಕೆನೆರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ನವೀನ್‍ಕುಮಾರ್.ಎನ್, ಎಸ್‍ಬಿಐ, ಆರ್‍ಬಿಒನ ಪ್ರಾದೇಶಿಕ ವ್ಯವಸ್ಥಾಪಕರಾದ ಲಕ್ಷ್ಮಣ ಸಿಂಹ, ಕೆಜಿಬಿ ಆರ್‍ಒನ ಪ್ರಾದೇಶಿಕ ವ್ಯವಸ್ಥಾಪಕರಾದ ರಮಾನಾಥ ಆಚಾರ್ಯ, ಕೆನೆರಾ ಬ್ಯಾಂಕ್‍ನ ಎಲ್‍ಡಿಎಂ ಸೋಮನಗೌಡ ಐನಾಪೂರ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------
ಶುಕ್ರವಾರ, ಮಾರ್ಚ್ 24, 2023
ಸಿರುಗುಪ್ಪ: ವಿವಿಧೆಡೆ ವಿದ್ಯುತ್ ವ್ಯತ್ಯಯ ಮಾ.26ರಂದು
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ ತೆಕ್ಕಲಕೋಟೆಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.26ರಂದು ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ತೆಕ್ಕಲಕೋಟೆ ಪಟ್ಟಣ, ದೇವಿನಗರ, ಹಳೆಕೋಟೆ, ನಿಟ್ಟೂರು, ಎರಕಲ್, ಉಪ್ಪಾರ ಹೊಸಳ್ಳಿ, ಬಲುಕುಂದಿ, ಬೂದುಗುಪ್ಪ, ಮೈಲಾಪುರ ಕ್ಯಾಂಪ್, ಎಂ.ಸೂಗೂರು ಗ್ರಾಮಗಳು ಮತ್ತು ಬೈರಾಪುರ, ಸಿರಿಗೇರಿ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ತುರ್ತು ಕಾರ್ಯ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ರಾಹಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸಗಳನ್ನು ಮಾಡಬಾರದೆಂದು ಅವರು ತಿಳಿಸಿದ್ದಾರೆ.
------
ರೂಪನಗುಡಿಯಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ನಿಮಿತ್ತ ಜಾಗೃತಿ ಕಾರ್ಯಕ್ರಮ
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು.
ದಂತ ತಜ್ಞೆ ಡಾ.ಪ್ರಿಯಾಂಕಾ ರೆಡ್ಡಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಮ್ಮ ದೇಹ ಸಂಪೂರ್ಣ ಆರೋಗ್ಯವಾಗಿಡಲು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಪ್ರತಿದಿನ ಹಲ್ಲುಜ್ಜಬೇಕು. ತಂಬಾಕು ಮತ್ತು ಕೆಟ್ಟ ಚಟಗಳಿಂದ ದೂರಬೇಕು ಮತ್ತು ತಿಂಗಳಿಗೊಮ್ಮೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಬಾಯಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ನೇಕರ್ ಅವರು ಮಾತನಾಡಿ, ಬಾಯಿ ಆರೋಗ್ಯದ ಸಮಸ್ಯೆಗಳು ಇರುವವರು ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಅದು ಬಾಯಿ ಕ್ಯಾನ್ಸರ್‍ಗೆ ಕಾರಣವಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯುμï ವೈದ್ಯಾಧಿಕಾರಿ ಡಾ.ನಾರಾಯಣ ಬಾಬು ಟಿ.ಎಂ, ಕಚೇರಿ ಅಧೀಕ್ಷಕಿ ಶಿಲ್ಪಾ, ಪ್ರಥಮ ದರ್ಜೆ ಸಹಾಯಕ ವಿರೂಪಾಕ್ಷಸ್ವಾಮಿ, ಸಮುದಾಯ ಆರೋಗ್ಯಾಧಿಕಾರಿ ಲಲಿತಮ್ಮ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
-------
ವ್ಯಕ್ತಿ ಕಾಣೆ
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ನಗರದ ರೂಪನಗುಡಿ ರಸ್ತೆಯ ಹುಲಿಗೆಮ್ಮ ಗುಡಿ ಹತ್ತಿರದ ನಿವಾಸಿ ಅಲ್ಲಾ ಭಕಷ್ ಅಥವಾ ಖಾದರ್ ಖಾನ್ ಎನ್ನುವ 38 ವರ್ಷದ ವ್ಯಕಿಯು ಜ.21 ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.
ಚಹರೆ ಗುರುತು: 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಬಿಳಿ ಮಿಶ್ರಿತ ಕಪ್ಪು ತಲೆ ಕೂದಲು, ಬಿಳಿಮಿಶ್ರಿತ ಕಪ್ಪು ಗಡ್ಡ ಹೊಂದಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
-------
ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಮಾ.27ರಂದು
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ದಕ್ಷಿಣ ವಿದ್ಯುತ್ ಉಪ-ಕೇಂದ್ರದಿಂದ ಹೊರಡುವ ಎರಡು 11ಕೆ.ವಿ ವಿದ್ಯುತ್ ಮಾರ್ಗಗಳಲ್ಲಿ ಜಂಗಲ್ ಕಟ್ಟಿಂಗ್ ಮತ್ತು ಮಾರ್ಗದ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದ ಐಪಿ ಮತ್ತು ಎನ್‍ಜೆವೈ ಮಾರ್ಗಗಳಲ್ಲಿ ಮಾ.27ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು: ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ ಗ್ರಾಮ, ಸಂಜೀವರಾಯನ ಕೋಟೆ ಗ್ರಾಮ, ಮುಂಡರಿಗಿ ಗ್ರಾಮ, ಚರಕುಂಟೆ ಗ್ರಾಮ. ಎಫ್-26 ಚರಕುಂಟ ಐ.ಪಿ ಫೀಡರ್‍ನ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
----------
ಲೋಕಾಯುಕ್ತರಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾ.27ರಿಂದ
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಬಳ್ಳಾರಿ ವಿಭಾಗದ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಪಿ.ಎ.ಪುರುಷೋತ್ತಮ ಮಾರ್ಗದÀರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕೆ.ರಾಮರಾವ್ ಮತ್ತು ಪೆÇಲೀಸ್ ನಿರೀಕ್ಷಕರಾದ ಮಹಮ್ಮದ್ ರಫಿ, ಸಂಗಮೇಶ್ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಂಡೂರು ಮತ್ತು ಸಿರುಗುಪ್ಪ ತಾಲೂಕು ಕೇಂದ್ರಗಳಲ್ಲಿ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದಿರುವ ಕುರಿತು ಕುಂದುಕೊರತೆಗಳ ಅಹವಾಲುಗಳ ಸ್ವೀಕಾರವನ್ನು ಮಾ.27ರಿಂದ 31ರವರೆಗೆ ನಡೆಸಲಾಗುತ್ತದೆ ಎಂದು ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಪಿ.ಎ.ಪುರುಷೋತ್ತಮ ಅವರು ತಿಳಿಸಿದ್ದಾರೆ.
ಮಾ.27ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಸಂಡೂರು ತಹಶೀಲ್ದಾರರ ಕಚೇರಿ ಸಭಾಂಗಣ ಮತ್ತು ಮಾ.28ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಕುರುಗೋಡು ತಹಶೀಲ್ದಾರರ ಕಚೇರಿ ಸಭಾಂಗಣ ಮತ್ತು ಮಾ.29ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಸಿರುಗುಪ್ಪ ತಹಶೀಲ್ದಾರರ ಕಚೇರಿ ಸಭಾಂಗಣ, ಮಾ.30ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಕಂಪ್ಲಿ ತಹಶೀಲ್ದಾರರ ಕಚೇರಿ ಸಭಾಂಗಣ, ಮಾ.31ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಬಳ್ಳಾರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಇಲ್ಲಿ ಕುಂದು ಕೊರತೆಗಳಿರುವ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
-----
ಅರ್ಜಿ ಆಹ್ವಾನ
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ 2023-2024 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಾಗೂ ಅನೈರ್ಮಲ್ಯಕರ ವೃತ್ತಿಯಲ್ಲಿ ತೊಡಗಿರುವ ಪೋಷಕರ ಪ್ರತಿಭಾವಂತ ಗಂಡು ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ 8ನೇ ತರಗತಿಗೆ ಸೇರಿಸಲು ಜಿಲ್ಲೆಯಿಂದ 04 ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ 6 ಮತ್ತು 7ನೇ ತರಗತಿಯ ಅಂಕಪಟ್ಟಿಯೊಂದಿಗೆ ಏಪ್ರೀಲ್ 5 ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಾಷು ಅವರು ತಿಳಿಸಿದ್ದಾರೆ.
------
ಸರ್ವೋತ್ತಮ ಸೇವಾ ಪ್ರಶಸ್ತಿ: ಅರ್ಜಿ ಆಹ್ವಾನ
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ 2023ನೇ ಸಾಲಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಪಡೆಯಲು ತಮ್ಮ ನಾಮ ನಿರ್ದೇಶನ ಸಲ್ಲಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
"ಸರ್ವೋತ್ತಮ ಸೇವಾ ಪ್ರಶಸ್ತಿ"ಯ ಎರಡು ಹಂತದ ಪ್ರಶಸ್ತಿಗಳಿಗೂ ಅರ್ಜಿ ಸಲ್ಲಿಸಬಯಸುವವರು, ಪ್ರತಿ ಹಂತಕ್ಕೂ ಪ್ರತ್ಯೇಕವಾಗಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಬೇಕು.
ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರು ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in/ ನಲ್ಲಿ ಮಾರ್ಚ್ 31 ರೊಳಗಾಗಿ ಸಲ್ಲಿಸಬೇಕು. ಆದೇಶದ ಪ್ರತಿಗಳನ್ನು ಜಾಲತಾಣ https://dparar.karnataka.gov.in/ ರ ಸರ್ಕಾರದ ಆದೇಶಗಳು, ತರಬೇತಿ ಹಾಗೂ ಇತರೆ ವಿವರಗಳನ್ನು ಇಲ್ಲಿ ಅವಲೋಕಿಸಬಹುದಾಗಿದೆ.
ಪ್ರಶಸ್ತಿ ವಿವರ: ಜಿಲ್ಲಾ ಮಟ್ಟದ (31 ಜಿಲ್ಲೆ*10 ಪ್ರಶಸ್ತಿ) ಸೇರಿದಂತೆ 310 ಪ್ರಶಸ್ತಿಗಳು, ರಾಜ್ಯ ಮಟ್ಟದ 30 ಪ್ರಶಸ್ತಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶರತ್ ಸಹಾಯವಾಣಿ ಸಂಖ್ಯೆ 080-22230060ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
----------
ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023
ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ: ಎಸ್‍ಪಿ ರಂಜೀತ್‍ಕುಮಾರ್ ಬಂಡಾರು
ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಮತ್ತು ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣೆಯಲ್ಲಿ ಯಾವುದೇ ಅವ್ಯವಹಾರ ಇಲ್ಲದೇ ಕಟ್ಟುನಿಟ್ಟಾಗಿ ಚುನಾವಣೆ ಎದುರಿಸಲು, ಜಿಲ್ಲಾ ವ್ಯಾಪ್ತಿಯಲ್ಲಿ 18 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಅಂತರ್‍ರಾಜ್ಯ-11, ಅಂತರ್ ಜಿಲ್ಲೆ-5, ಜಿಲ್ಲಾ ವ್ಯಾಪ್ತಿಯಲ್ಲಿ 2 ಚೆಕ್‍ಪೋಸ್ಟ್‍ಗಳನ್ನು ತೆರೆದು ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ. ದಿನದ 24 ಗಂಟೆ ವಾಹನಗಳ ಮತ್ತು ಸಂಶಯಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಚಟುವಟಿಕೆಗಳ, ಮತದಾರರಿಗೆ ಉಚಿತ ಆಮಿಷಗಳನ್ನು ಒಡ್ಡುವರರ ಬಗ್ಗೆ, ಅಕ್ರಮ ಮದ್ಯ ಸಾಗಾಣಿಕೆ ಮತ್ತು ವಾರಸುದಾರರಿಲ್ಲದ ವಸ್ತುಗಳ ಮೇಲೆ ದಾಳಿ ಮಾಡಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದಂತೆ ನೆರೆಯ ಜಿಲ್ಲೆಗಳಾದ ವಿಜಯನಗರ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಮತ್ತು ಗಡಿಭಾಗದ ಆಂಧ್ರಪ್ರದೇಶ, ಅನಂತಪುರ ಹಾಗೂ ಕರ್ನೂಲು ಜಿಲ್ಲೆಯ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳೊಂದಿಗೆ ಈಗಾಗಲೇ ಜಿಲ್ಲಾ ಗಡಿ ಅಪರಾಧ ಸಭೆಗಳನ್ನು ವಿಡಿಯೋ ಸಂವಾದದ ಮೂಲಕ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿರುವಂತಹ ಎನ್.ಬಿ.ಡಬ್ಲ್ಯೂ ವ್ಯಕ್ತಿಗಳು, ರೌಡಿಶೀಟರ್‍ಗಳು, ಸಂಶಯುತ ಗಲಭೆ ಮಾಡುವಂತಹ ವ್ಯಕ್ತಿಗಳು ಮತ್ತು ಗಡಿ ಭಾಗದ ಗ್ರಾಮಗಳಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಗಡಿ ತಪಾಸಣೆ ಚೆಕ್ ಪೆÇೀಸ್ಟ್‍ಗಳಲ್ಲಿ ನಿರ್ವಹಿಸುವ ಬಗ್ಗೆ ಪರಸ್ಪರ ಸಹಕಾರ ಮತ್ತು ಮಾಹಿತಿಗಳ ವಿನಿಮಯ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಪೆÇಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ವಿವಿಧ ಠಾಣೆಗಳಲ್ಲಿ ಏರಿಯಾ ಡಾಮಿನೇಷನ್ ಪ್ರತಿದಿನ ನಿರ್ವಹಿಸಲಾಗುತ್ತಿದೆ. ಈ ಸಮಯದಲ್ಲಿ ವಾಹನ ತಪಾಸಣೆ, ರೌಡಿಗಳ ತಪಾಸಣೆ, ಸಂಶಯಾಸ್ಪದ ವ್ಯಕ್ತಿಗಳ ತಪಾಸಣೆ, ಕೋಟ್ಪಾ ಅಬಕಾರಿ ಪ್ರಕರಣಗಳು ಮತ್ತು ಕೆ.ಪಿ.ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವುದು, ವಾರೆಂಟ್ ಆಸಾಮಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ಕರ್ತವ್ಯ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಒಟ್ಟು 9 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ.1,60,000 ಮೌಲ್ಯದ 5.5 ಕೆ.ಜಿ ಮಾದಕ ದ್ರವ್ಯವನ್ನು ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ವಿವಿಧ ಠಾಣೆಗಳಲ್ಲಿ ಈ ಹಿಂದೆ ದಾಖಲಾಗಿದ್ದ ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡಿದ್ದ ರೂ.7,72,532 ಮೌಲ್ಯದ 134.826 ಕೆ.ಜಿ ಮಾದಕ ವಸ್ತುಗಳನ್ನು ಈ ಡ್ರಗ್ ಡಿಸ್‍ಪೆÇೀಸಲ್ ಕಮಿಟಿ ನೇತೃತ್ವದಲ್ಲಿ ಹರಗಿನದೋಣಿ ಗ್ರಾಮದ ಹೊರ ವಲಯದಲ್ಲಿ ನಾಶಪಡಿಸಲಾಗಿರುತ್ತದೆ ಎಂದು ಹೇಳಿದರು.
ಬಳ್ಳಾರಿ ನಗರ ಸಂಚಾರ ವ್ಯಾಪ್ತಿಯಲ್ಲಿ 2 ಸಂಚಾರಿ ದೀಪಗಳನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿವಿಧ ಕಡೆ ಸೈನ್ ಬೋರ್ಡ್‍ಗಳನ್ನು ಅಳವಡಿಸಲಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.
--------
ವಿಶ್ವ ಕ್ಷಯರೋಗ ದಿನಾಚರಣೆ
ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ: ಡಿಹೆಚ್‍ಒ ಡಾ.ಜರ್ನಾಧನ
ಬಳ್ಳಾರಿ,ಮಾ.23(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ 1 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 192 ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಗುರಿ ಹೊಂದಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜರ್ನಾಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಘೋಷಣೆಯಂತೆ 2025 ಕ್ಕೆ ಭಾರತ ದೇಶವನ್ನು ಕ್ಷಯ ಮುಕ್ತ ಮಾಡಲು ಪಣತೊಟ್ಟಿರುವುದರಿಂದ ದೇಶದ ಎಲ್ಲಾ ನಾಗರೀಕರು ಕೈಜೋಡಿಸುವ ಮೂಲಕ ಟಿ.ಬಿ ಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ಎಂದು ಕರೆ ನೀಡಿರುತ್ತಾರೆ ಎಂದು ತಿಳಿಸಿದರು.
ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ. ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬೀಳುವುದು. ಹಸಿವಾಗದಿರುವುದು ತೂಕ ಕಡಿಮೆಯಾಗುವುದು. ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಬೇದಿ, ಕುತ್ತಿಗೆ ಬಗುಲುಗಳಲ್ಲಿ ಗಡ್ಡೆ ಸೇರಿದಂತೆ ಈ ಲಕ್ಷಣಗಳಿದ್ದರೆ ತಕ್ಷಣವೇ ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ 2 ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತೀ ಮಾಸಿಕ ಸಭೆಗಳಲ್ಲಿ ಕ್ಷಯರೋಗಿಗಳ ಪತ್ತೆ, ಚಿಕಿತ್ಸೆ ಹಾಗೂ ಮರಣ ಹೊಂದಿರುವ ಶೇಕಡವಾರು ಕಡಿಮೆಗೊಳಿಸಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗದರ್ಶನ ನೀಡುತ್ತಿರುವುದರಿಂದ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಸಿಕೊಂಡು ಹೋಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನಮ್ಮ ಸಿಬ್ಬಂದಿಗಳು ನಿರಂತರವಾಗಿ ಕ್ಷೇತ್ರಗಳಲ್ಲಿ ಕ್ಷಯರೋಗಿಗಳ ಅನುಸರಣೆ ಮಾಡುತ್ತಿರುವುದರಿಂದ ಕ್ಷಯವನ್ನು 2025ರ ವೇಳೆಗೆ ಕ್ಷಯ ಮುಕ್ತ ಬಳ್ಳಾರಿ ಮಾಡಬಹುದೆಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪಂಪಾಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಹೆಚ್ಚಾಗಿದ್ದು, ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗದಿಂದ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಅಡಿಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಯಾವುದಾದರು ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್‍ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುμÁ್ಠನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವೀರೇಶ್.ಹೆಚ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ಗಮನ ಸೆಳೆದ ಜಾಗೃತಿ ಜಾಥಾ:* ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಿಲ್ಲಾ ಆಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾವು ನೋಡುಗರನ್ನು ಗಮನ ಸೆಳೆಯಿತು.
ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಚಾಲನೆ ನೀಡಿದರು. ಜಾಥಾವು ಜಿಲ್ಲಾ ಆಸ್ಪತ್ರೆ ಅವರಣದಿಂದ ಆರಂಭವಾಗಿ ಸಂಗಮ ವೃತ್ತದಿಂದ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿ ನಂತರ ಮರಳಿ ಜಿಲ್ಲಾ ಆಸ್ಪತ್ರೆಯವರೆಗೆ ಸಾಗಿತು. ಜಾಥಾದಲ್ಲಿ 200-250 ಎ.ಎನ್.ಎಂ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)









































