ಶುಕ್ರವಾರ, ಮಾರ್ಚ್ 17, 2023

ಮಾ.21ರೊಳಗಾಗಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಬಳ್ಳಾರಿ ರಸ್ತೆಗೆ ಬರುವ ಸರ್ವೆ ನಂ 408/1 ರಲ್ಲಿ 3.91 ಎಕರೆ ಹಾಗೂ 408/2 ರಲ್ಲಿ 3.90 ಎಕರೆ ಮತ್ತು ಸರ್ವೆ 395 ರಲ್ಲಿ 8.0 ಎಕರೆ ಸೇರಿದಂತೆ ಒಟ್ಟು 15.81 ಎಕರೆ ವಿಸ್ತೀರ್ಣದ ಆಶ್ರಯ ವಸತಿ ವಿನ್ಯಾಸದಲ್ಲಿ ರಚನೆಯಾಗುವ ನಿವೇಶನಗಳಿಗೆ ಸರ್ಕಾರ ನಿಯಮಾನುಸಾರ ಪರಿಶಿಷ್ಟ ಜಾತಿ ಶೇ.17.15, ಪರಿಶಿಷ್ಟ ಪಂಗಡ ಶೇ.6.95, ಹಿಂದುಳಿದ ವರ್ಗಕ್ಕೆ ಶೇ.7.25, ಅಲ್ಪಸಂಖ್ಯಾತರಿಗೆ ಶೇ.9 ಮತ್ತು ವಿಕಲಚೇತನರಿಗೆ ಶೇ.5 ಹಾಗೂ ಮಾಜಿ ಸೈನಿಕರಿಗೆ ಶೇ.1ರಂತೆ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ದಾಖಲೆಗಳ ಆಧಾರ ಮೇಲೆ ಪರಿಗಣಿಸಲಾಗುತ್ತದೆ. ಈ ಹಿಂದೆ ಮತ್ತು ಹೊಸದಾಗಿ ಸಲ್ಲಿಸಿದ ಅರ್ಜಿಗಳನ್ನೂ ಪರಿಶೀಲನೆ ಒಳಪಡಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಲೋಪದೋಷಗಳು ಮತ್ತು ತಪ್ಪು ಮಾಹಿತಿ ಸಲ್ಲಿಸಿದ್ದಲ್ಲಿ ಪಟ್ಟಿಯನ್ನು ಪುರಸಭೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರಚುರ ಪಡಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಮಾರ್ಚ್ 21 ರೊಳಗಾಗಿ ಪುರಸಭೆ ಕಚೇರಿಗೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಚೇರಿ ದೂ.08393-263166ಗೆ ಸಂಪರ್ಕಿಸಬಹುದಾಗಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ