ಗುರುವಾರ, ಮಾರ್ಚ್ 16, 2023
ಯುವಕ ಕಾಣೆ
ಬಳ್ಳಾರಿ,ಮಾ.7(ಕರ್ನಾಟಕ ವಾರ್ತೆ): ನಗರದ ಅನಂತಪುರ ರಸ್ತೆಯ ಜನತಾ ನಗರದ ನಿವಾಸಿ ಡಿ.ರಂಗನಾಥ ಎನ್ನುವ 20 ವರ್ಷದ ಯುವಕ ಮಾ.04 ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ ಗುರುತು: 5.6 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಚೆಕ್ಸ್ ಇರುವ ನೀಲಿ ಮತ್ತು ಆರೆಂಜ್ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಗಾಂಧಿನಗರ ಪೆÇಲೀಸ್ ಠಾಣೆಯ ದೂ.08392-272192, ಠಾಣೆಯ ಪಿಎಸ್‍ಐ ಮೊ.9480803082, ಪಿಐ ಮೊ.9480803046 ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ