ಶುಕ್ರವಾರ, ಮಾರ್ಚ್ 24, 2023

ಅಪ್ರೆಂಟಿಸ್ ತರಬೇತಿ; ನೇರ ಸಂದರ್ಶನ ಮುಂದೂಡಿಕೆ ಬಳ್ಳಾರಿ,ಮಾ.23(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ಘಟಕಗಳಲ್ಲಿ ಐಟಿಐ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅಪ್ರೆಂಟಿಶಿಪ್ ತರಬೇತಿಗಾಗಿ ಮಾ.23 ರಂದು ನಡೆಯಬೇಕಿದ್ದ ನೇರ ಸಂದರ್ಶನವು ಕಾರಣಾಂತರಗಳಿಂದ ಮುಂದೂಡಿ ಮಾ.27 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಎಸ್.ಪಿ.ಸರ್ಕಲ್ ಹತ್ತಿರದ ಸಿರುಗುಪ್ಪ ರಸ್ತೆಯ ಕಕರಸಾನಿ ಬಳ್ಳಾರಿ ವಿಭಾಗೀಯ ಕಚೇರಿಯಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9880120611, 9916164369 ಮತ್ತು 7760992153 ಅಥವಾ www.kkrtc.karnataka.gov.in ವೆಬ್‍ಸೈಟ್ ಗೆ ಭೇಟಿ ನೀಡಬಹುದಾಗಿದೆ ಎಂದು ಕೆಕೆಆರ್‍ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ