ಮಂಗಳವಾರ, ಮಾರ್ಚ್ 21, 2023

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ ವಾಯು ಹುದ್ದೆ: ನೊಂದಣಿಗೆ ಆಹ್ವಾನ ಬಳ್ಳಾರಿ,ಮಾ.21(ಕರ್ನಾಟಕ ವಾರ್ತೆ): ಭಾರತೀಯ ವಾಯುಪಡೆಯ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೊಂದಣಿಗೆ ಆಹ್ವಾನಿಸಲಾಗಿದೆ. ವಿದ್ಯಾರ್ಹತೆಯು ದ್ವಿತೀಯ ಪಿ.ಯು.ಸಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಯೋಮಿತಿಯು ಅಭ್ಯರ್ಥಿಗಳು 2002 ಡಿಸೆಂಬರ್ 26 ರಿಂದ 2006 ಜೂನ್ 26 ರ ನಡುವೆ ಜನಿಸಿರಬೇಕು. ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಲು ಕೊನೆಯ ದಿನ ಮಾರ್ಚ್ 31 ಆಗಿರುತ್ತದೆ. ಆನ್‍ಲೈನ್ ನೊಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ಆನ್‍ಲೈನ್ ಪರೀಕ್ಷೆಯು ಮೇ ತಿಂಗಳಿನಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ. 08392-273988 ಅಥವಾ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ