ಶುಕ್ರವಾರ, ಮಾರ್ಚ್ 24, 2023

ವ್ಯಕ್ತಿ ಕಾಣೆ ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ನಗರದ ರೂಪನಗುಡಿ ರಸ್ತೆಯ ಹುಲಿಗೆಮ್ಮ ಗುಡಿ ಹತ್ತಿರದ ನಿವಾಸಿ ಅಲ್ಲಾ ಭಕಷ್ ಅಥವಾ ಖಾದರ್ ಖಾನ್ ಎನ್ನುವ 38 ವರ್ಷದ ವ್ಯಕಿಯು ಜ.21 ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ. ಚಹರೆ ಗುರುತು: 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಬಿಳಿ ಮಿಶ್ರಿತ ಕಪ್ಪು ತಲೆ ಕೂದಲು, ಬಿಳಿಮಿಶ್ರಿತ ಕಪ್ಪು ಗಡ್ಡ ಹೊಂದಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ