ಬುಧವಾರ, ಮಾರ್ಚ್ 29, 2023

ಬೇಸಿಗೆ ತರಬೇತಿ ಶಿಬಿರ ಏ.1ರಿಂದ ಪ್ರಾರಂಭ; ನೊಂದಣಿಗೆ ಆಹ್ವಾನ ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ನಲ್ಲಚೇರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಈಜುಕೊಳದಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಏಪ್ರೀಲ್ 1 ರಿಂದ ಆರಂಭವಾಗಲಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದು. *ಈಜುಕೊಳ ಶಿಬಿರ:* ಈಜುಕೊಳ ಶಿಬಿರಕ್ಕೆ 21 ದಿನಗಳಂತೆ ಮೂರು ಶಿಬಿರಗಳು ನಡೆಯುತ್ತಿದ್ದು, ಒಬ್ಬರಿಗೆ ಶುಲ್ಕ ರೂ.1300 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಒಂದನೇ ಶಿಬಿರವು ಏ.1 ರಿಂದ 21 ರವರೆಗೆ, ಎರಡನೇ ಶಿಬಿರವು ಏ.23 ರಿಂದ ಮೇ 14 ರವರೆಗೆ, ಮೂರನೇ ಶಿಬಿರವು ಮೇ 16 ರಿಂದ ಜೂನ್ 4 ರವರೆಗೆ ನಡೆಯಲಿವೆ. ಸಮಯವು ಸೋಮವಾರ ರಜೆಯನ್ನು ಹೊರತುಪಡಿಸಿ ಮಂಗಳವಾರದಿಂದ ಭಾನುವಾರದವರೆಗೆ ಬ್ಯಾಚ್ ವಾರು ಬೆಳಗ್ಗೆ 9ರಿಂದ 10, 10ರಿಂದ 11, 11ರಿಂದ 12 ರವರಿಗೆ ನಡೆಯಲಿವೆ ಹಾಗೂ ಮಹಿಳಾ ಬ್ಯಾಚ್ ಬೆಳಗ್ಗೆ 8 ರಿಂದ 9 ಮತ್ತು ಸಂಜೆ 5 ರಿಂದ 6 ರವರೆಗೆ ನಡೆಯಲಿವೆ. *ಬ್ಯಾಡ್ಮಿಂಟನ್:* ಬ್ಯಾಡ್ಮಿಂಟನ್ ಶಿಬಿರವು 21 ದಿನಗಳಂತೆ ಎರಡು ಶಿಬಿರಗಳಲ್ಲಿ ಏ.1 ರಿಂದ 21 ರವರೆಗೆ ಮತ್ತು ಮೇ 1 ರಿಂದ 21 ರವರೆಗೆ ನಡೆಯಲಿವೆ. ಒಬ್ಬರಿಗೆ ಶುಲ್ಕ ರೂ.1850 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಸಮಯ ಮಂಗಳವಾರದಿಂದ ಭಾನುವಾರದವರೆಗೆ (ಸೋಮವಾರ ರಜೆ) ನಡೆಯಲಿದ್ದು, ಬ್ಯಾಚ್ ವಾರು ಆಯಾ ಸಮಯದಲ್ಲಿ ಪ್ರಾರಂಭವಾಗಲಿವೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಮೊ.7899935141, 8880999815, 9739852460 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ