ಮಂಗಳವಾರ, ಮಾರ್ಚ್ 21, 2023

ಉಚಿತ ನರ್ಸಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನ ಬಳ್ಳಾರಿ,ಮಾ.20(ಕರ್ನಾಟಕ ವಾರ್ತೆ): ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯಿಂದ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ, ಮನೆ ಮತ್ತು ಆಸ್ಪತ್ರೆ ಆರೈಕೆ ಮಾಡುವವರಿಗೆ ಉಚಿತ ನರ್ಸಿಂಗ್ ತರಬೇತಿ ಮತ್ತು ಉದ್ಯೋಗ ಕಲ್ಪಿಸಿಕೊಡಲು ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 50 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಮೊದಲು ಬಂದವರಿಗೆ ಆದ್ಯತೆ ಇರುತ್ತದೆ. ತರಬೇತಿಯಲ್ಲಿ 30 ದಿನಗಳ ಪಠ್ಯ ಮತ್ತು 60 ದಿನಗಳ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳ ವಯೋಮಿತಿ 18-42 ಒಳಗಿರಬೇಕು, ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು, ಸರಳ ಇಂಗ್ಲೀಷ್ ಗ್ರಹಿಕಾ ಸಾಮಥ್ರ್ಯ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಎಸ್.ಪಿ.ವೃತ್ತ, ಪಾರ್ವತಿನಗರದ ಬಸವಭವನ ರಸ್ತೆಯ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಅಥವಾ ದೂ.08392-27398 9019847029, 9964502514, 8073852104, 984444958 ಗೆ ಸಂಪಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ