ಸೋಮವಾರ, ಮಾರ್ಚ್ 13, 2023

ದ್ವಿತೀಯ ಪಿಯು ಪರೀಕ್ಷೆ; ಅರ್ಥಶಾಸ್ತ್ರ ವಿಷಯ ಸುಗಮ ಬಳ್ಳಾರಿ,ಮಾ.13(ಕರ್ನಾಟಕ ವಾರ್ತೆ): ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, 16 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿವೆ. ಮಾ.13 ಸೋಮವಾರ ಅರ್ಥಶಾಸ್ತ್ರ ವಿಷಯ ಪರೀಕ್ಷೆಯು ಸುಗಮವಾಗಿ ನಡೆದಿದ್ದು, ಯಾವುದೇ ಪರೀಕ್ಷಾ ಅವ್ಯವಹಾರಗಳು ನಡೆದಿರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಗೇಂದ್ರ.ಹೆಚ್ ಅವರು ತಿಳಿಸಿದ್ದಾರೆ. *ಹಾಜರಾದ ವಿದ್ಯಾರ್ಥಿಗಳ ವಿವರ:* ಜಿಲ್ಲೆಯಲ್ಲಿ ಅರ್ಥಶಾಸ್ತ್ರ ಪರೀಕ್ಷೆಗೆ ಒಟ್ಟು 8940 ವಿದ್ಯಾರ್ಥಿಗಳು ನೊಂದಾಯಿಸಿದ್ದು, 8451 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ಒಟ್ಟು 489 ವಿದ್ಯಾಥಿಗಳು ಗೈರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ