ಗುರುವಾರ, ಮಾರ್ಚ್ 16, 2023

ಅನಾಮಧೇಯ ವ್ಯಕ್ತಿ ಶವ ಪತ್ತೆ ಬಳ್ಳಾರಿ,ಮಾ.15(ಕರ್ನಾಟಕ ವಾರ್ತೆ): ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೋತಿ ಸರ್ಕಲ್ ಹತ್ತಿರದಲ್ಲಿರುವ ಇಂದಿರಾ ಕ್ಯಾಂಟೀನ್ ಹೊರಗಡೆ ಬುಡಾ ಕಚೇರಿ ಹೋಗುವ ದಾರಿಯ ಹತ್ತಿರ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿಯು ಮಾ.10ರಂದು ಮೃತಪಟ್ಟಿದ್ದು, ಮೃತ ದೇಹವನ್ನು ವಿಮ್ಸ್ ಆಸ್ಪತ್ರೆಯ ಶೀತಲೀಕೃತ ಶವಗಾರ ಕೋಣೆಯಲ್ಲಿರಿಸಲಾಗಿದೆ. ಮೃತನ ಸಂಬಂಧಿಕರ ಪತ್ತೆಗಾಗಿ ಸಹಕರಿಸಬೇಕು ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ. ಮೃತನ ಚಹರೆ: ಅಂದಾಜು 5.6 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಅಗಲವಾದ ಮುಖ ಹೊಂದಿದ್ದು, ತಲೆಯಲ್ಲಿ ಮೂರು ಇಂಚಿನ ಬಿಳಿ ಕಪ್ಪು ಕೂದಲು, ಬಿಳಿ ಮಿಶ್ರಿತ ಕಪ್ಪು ಮೀಸೆ ಮತ್ತು ಗಡ್ಡ ಇರುತ್ತದೆ. ಹಸಿರು ಬಣ್ಣದ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100, ಬ್ರೂಸ್‍ಪೇಟೆ ಪೊಲೀಸ್ ಠಾಣೆ ದೂ.08392-272022, ಠಾಣೆಯ ಪಿಎಸ್‍ಐ ಮೊ.9480803081, ಪಿಐ ಮೊ.9480803045 ಗೆ ಸಂಪರ್ಕಿಸಬಹುದಾಗಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ