ಗುರುವಾರ, ಮಾರ್ಚ್ 16, 2023

ಮದ್ಯ ಸಾಗಾಣಿಕೆ: ವ್ಯಕ್ತಿಯ ಬಂಧನ ಬಳ್ಳಾರಿ,ಮಾ.15(ಕರ್ನಾಟಕ ವಾರ್ತೆ): ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಬಾಲಕೃಷ್ಣ ಅವರ ಮಾರ್ಗದರ್ಶನದಂತೆ ಹಾಗೂ ಬಳ್ಳಾರಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಮಂಜುನಾಥ.ಎನ್ ಅವರ ನಿರ್ದೇಶನದಂತೆ ಜಿಲ್ಲಾ ಅಪರಾಧ ಮಾಹಿತಿ ಬ್ಯೂರೋದ ಅಬಕಾರಿ ನಿರೀಕ್ಷಕರಾದ ತುಕರಾಮ್ ನಾಯ್ಕ, ಅಬಕಾರಿ ಉಪನಿರೀಕ್ಷಕರಾದ ಪಿ.ಗಿರೀಶ್ ಮತ್ತು ಸಿಬ್ಬಂದಿಯೊಂದಿಗೆ ಖಚಿತ ಮಾಹಿತಿ ಮೇರೆಗೆ ನರದ ಅನಂತಪುರ ರಸ್ತೆಯ ಬಸವರಾಜೇಶ್ವರಿ ಶಾಲೆ ಹತ್ತಿರ ಶೋಧನೆ ಮಾಡುತ್ತಿರುವ ಸಮಯದಲ್ಲಿ ರಮೇಶ್ ಎನ್ನುವ ವ್ಯಕ್ತಿ ಒಟ್ಟು 12.96ಲೀ ಮದ್ಯವನ್ನು ಆಂಧ್ರಪ್ರದೇಶಗೆ ಸಾಗಾಣಿಕೆ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಜಿಲ್ಲಾ ಅಪರಾಧ ಮಾಹಿತಿ ಬ್ಯೂರೋದ ಅಬಕಾರಿ ನಿರೀಕ್ಷಕರಾದ ತುಕರಾಮ್ ನಾಯ್ಕ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ