ಶುಕ್ರವಾರ, ಮಾರ್ಚ್ 17, 2023

ಮಗುವಿಗೆ ಸಂಪೂರ್ಣ ಲಸಿಕಾಕರಣ ಮಾಡಿಸಿ: ಡಾ.ಶರಣಬಸಪ್ಪ ಗಣಜಲಖೇಡ ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳ ಅಡಿಯಲ್ಲಿ ಪ್ರಸ್ತುತ ರಾಜ್ಯದಲ್ಲಿ 12 ಮಾರಕ ರೋಗಗಳಿಗೆ ಲಸಿಕೆಯನ್ನು ಮಗುವಿನ ಒಂದು ವರ್ಷ ವಯಸ್ಸಿನ ಒಳಗೆ ಹಾಕಲಾಗುತ್ತಿದೆ. ತಮ್ಮ ಮಕ್ಕಳು ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳಲು ಕಲಬುರ್ಗಿ ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪ ನಿರ್ದೇಶಕರಾದ ಡಾ.ಶರಣಬಸಪ್ಪ ಗಣಜಲಖೇಡ ಅವರು ಹೇಳಿದರು. ರಾಷ್ಟ್ರೀಯ ಲಸಿಕಾ ದಿನ ಮತ್ತು ಮಕ್ಕಳ ಬಾಲ್ಯಾವಧಿಯಲ್ಲಿ ಬರುವ ಮಾರಕ ಕಾಯಿಲೆಗಳ ಹಿನ್ನಲೆ ಲಸಿಕಾ ನಂತರದ ಪ್ರತಿಕೂಲ ಘಟನೆಗಳ ಹಾಗೂ ಲಸಿಕೆಯಿಂದ ತಡೆಗಟ್ಟಬಹುದಾದ ಖಾಯಿಲೆಗಳ ಕಣ್ಗಾವಲು ಕುರಿತು ವಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಬಿ.ಸಿ.ರಾಯ್ ಸಭಾಂಗಣದಲ್ಲಿ ಗುರುವಾರ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಹಾಗೂ ಪ್ರಾಧ್ಯಾಪಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ಮಾತನಾಡಿ, ಮಕ್ಕಳ ಲಸಿಕಾ ವಿವರವನ್ನು ತಾಯಿ ಕಾರ್ಡ್‍ನಲ್ಲಿ ದಾಖಲಿಸಲಾಗುತ್ತಿದ್ದು, ಇದರ ಹೊರತಾಗಿ ವಲಸೆ ಹೊಗುವ ಸಮುದಾಯದ ಕ್ಕೆ ಒತ್ತು ನೀಡಿ ಅವರ ಮಕ್ಕಳಿಗೆ ಲಸಿಕೆ ನೀಡಲು ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು. ವಿಮ್ಸ್‍ನ ಪ್ರಭಾರಿ ನಿರ್ದೇಶಕ ಡಾ.ಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ವಿಶ್ವ ಅರೋಗ್ಯ ಸಂಸ್ಥೆ ಜಿಲ್ಲಾ ಘಟಕ ಕಣ್ಗಾವಲು ವೈದ್ಯಾಧಿಕಾರಿ ಅರ್.ಎಸ್.ಶ್ರೀಧರ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನೀಲ್‍ಕುಮಾರ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಐಎಮ್‍ಎ ಪ್ರತಿನಿಧಿ ಡಾ.ಬಿ.ಕೆ ಶ್ರೀಕಾಂತ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಾಲು ವೇಂಕಟೇಶ ಸೇರಿದಂತೆ ವಿಮ್ಸ್‍ನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ