ಶುಕ್ರವಾರ, ಮಾರ್ಚ್ 31, 2023

ಮಹಿಳೆ ಕಾಣೆ; ಪ್ರಕರಣ ದಾಖಲು ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ 5ನೇ ವಾರ್ಡ್‍ನ ನಿವಾಸಿ ಶಂಕ್ರಮ್ಮ ಎನ್ನುವ 32 ವರ್ಷದ ಮಹಿಳೆ ಮಾ.9ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ತೆಕ್ಕಲಕೋಟೆ ಪೊಲೀಸ್‍ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 4.10 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟಾಪ್, ಬಿಳಿ ಬಣ್ಣದ ಪೈಜಾಮ್ ಧರಿಸಿರುತ್ತಾಳೆ. ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆ ದೂ.08392-248013, ಮೊ.9480803055, ತೆಕ್ಕಲಕೋಟೆ ವೃತ್ತದ ಸಿಪಿಐ ಮೊ.9480803033, ಸಿರುಗುಪ್ಪ ಉಪವಿಭಾಗ ಡಿಎಸ್‍ಪಿ ಮೊ.9480803021, ಬಳ್ಳಾರಿ ಎಸ್ಪಿ ಮೊ.08392-258102 ಗೆ ಸಂಪರ್ಕಿಸಬಹುದಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ