ಶುಕ್ರವಾರ, ಮಾರ್ಚ್ 24, 2023

ಸಿರುಗುಪ್ಪ: ವಿವಿಧೆಡೆ ವಿದ್ಯುತ್ ವ್ಯತ್ಯಯ ಮಾ.26ರಂದು ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ ತೆಕ್ಕಲಕೋಟೆಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.26ರಂದು ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ತೆಕ್ಕಲಕೋಟೆ ಪಟ್ಟಣ, ದೇವಿನಗರ, ಹಳೆಕೋಟೆ, ನಿಟ್ಟೂರು, ಎರಕಲ್, ಉಪ್ಪಾರ ಹೊಸಳ್ಳಿ, ಬಲುಕುಂದಿ, ಬೂದುಗುಪ್ಪ, ಮೈಲಾಪುರ ಕ್ಯಾಂಪ್, ಎಂ.ಸೂಗೂರು ಗ್ರಾಮಗಳು ಮತ್ತು ಬೈರಾಪುರ, ಸಿರಿಗೇರಿ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ತುರ್ತು ಕಾರ್ಯ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ರಾಹಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸಗಳನ್ನು ಮಾಡಬಾರದೆಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ