ಶುಕ್ರವಾರ, ಮಾರ್ಚ್ 24, 2023

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಮಾ.27ರಂದು ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ದಕ್ಷಿಣ ವಿದ್ಯುತ್ ಉಪ-ಕೇಂದ್ರದಿಂದ ಹೊರಡುವ ಎರಡು 11ಕೆ.ವಿ ವಿದ್ಯುತ್ ಮಾರ್ಗಗಳಲ್ಲಿ ಜಂಗಲ್ ಕಟ್ಟಿಂಗ್ ಮತ್ತು ಮಾರ್ಗದ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದ ಐಪಿ ಮತ್ತು ಎನ್‍ಜೆವೈ ಮಾರ್ಗಗಳಲ್ಲಿ ಮಾ.27ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು: ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ ಗ್ರಾಮ, ಸಂಜೀವರಾಯನ ಕೋಟೆ ಗ್ರಾಮ, ಮುಂಡರಿಗಿ ಗ್ರಾಮ, ಚರಕುಂಟೆ ಗ್ರಾಮ. ಎಫ್-26 ಚರಕುಂಟ ಐ.ಪಿ ಫೀಡರ್‍ನ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ