ಶುಕ್ರವಾರ, ಮಾರ್ಚ್ 17, 2023
ಚುನಾವಣಾ ರಾಜಕೀಯ ಮತಪ್ರಚಾರ ಬ್ಯಾನರ್, ಹೋರ್ಡಿಂಗ್ಸ್‍ಗಳನ್ನು ಅನುಮತಿ ಇಲ್ಲದೆ ಹಾಕುವಂತಿಲ್ಲ್ಲ: ಡಿಸಿ ಮಾಲಪಾಟಿ
ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ಮುಂಬರುವ ದಿನಗಳಲ್ಲಿ 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು ಜಿಲ್ಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವಂತಹ ಬ್ಯಾನರ್‍ಗಳಾಗಲೀ, ಹೋರ್ಡಿಂಗ್ಸ್‍ಗಳಾಗಲೀ ಮತ್ತು ಕರಪತ್ರಗಳನ್ನಾಗಲಿ ಮುದ್ರಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜಕೀಯವಾದ ಬ್ಯಾನರ್, ಕರಪತ್ರಗಳನ್ನು ಮುದ್ರಿಸಲು ಬರುವರರ ಹತ್ತಿರ ನಿಗಧಿತ ನಮೂನೆಯಲ್ಲಿ ಸಹಿ ಪಡೆದ ನಂತರ ಮುದ್ರಿಸಬೇಕು. ಕರಪತ್ರವಾದಲ್ಲಿ ಮುದ್ರಣ ಮಾಡಿದ ಮೂರು ದಿನಗಳಲ್ಲಿ ಮುದ್ರಣ ಮಾಡಿದ 4 ಪ್ರತಿಗಳು, ಮುದ್ರಣಕ್ಕೆ ಖರ್ಚಾದ ವೆಚ್ಚದ ಬಿಲ್ ಸೇರಿದಂತೆ ಮುದ್ರಿಸಿದ ವಿವರವನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ಜಾತಿ ವೈಷಮ್ಯವುಳ್ಳ ಮಾಹಿತಿ, ಅಸಭ್ಯ ಪ್ರಚಾರ, ಸುಳ್ಳು ಮಾಹಿತಿ ಮುದ್ರಿಸುತಿಲ್ಲ, ಒಂದು ವೇಳೆ ಯಾರಾದರೂ ಮುದ್ರಣ ಮಾಡಿಸಲು ಬಂದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಮುಖ್ಯವಾಗಿ ಮುದ್ರಿಸಿದ ಬ್ಯಾನರ್ ಅಥವಾ ಫ್ಲೇಕ್ಸ್‍ನಲ್ಲಿ ಮುದ್ರಿಸುತ್ತಿರುವ ಮಾಲೀಕರ ಹೆಸರನ್ನು ನಮೂದಿಸಬೇಕು. ಇಲ್ಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ಪ್ಯಾಕಿಂಗ್ ಫಿಲ್ಡ್ ಆಮಂತ್ರಣ ಪತ್ರ, ಪಿಎಸಿ ಬ್ಯಾನರ್‍ಗಳು, ಪಾಲಿಸ್ಟೆರಿನ್‍ಗಳನ್ನೊಳಗೊಂಡಂತೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯವಾದ ಬ್ಯಾನರ್, ಹೋರ್ಡಿಂಗ್‍ಗಳನ್ನು ಅಳವಡಿಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು. ಮುದ್ರಕರಿಗೆ ಇದು ಅನ್ವಯಿಸುವುದಿಲ್ಲ, ಆದರೆ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ ಸೇರಿದಂತೆ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗೂ ಇತರರು ಹಾಜರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ