ಸೋಮವಾರ, ಮಾರ್ಚ್ 27, 2023

ಸ್ವಾತಂತ್ರ್ಯ ಹೋರಾಟಗಾರ ಟೇಕೂರ್ ಸುಬ್ರಮಣ್ಯ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾ.29ರಂದು ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಭಾರತ ಅಂಚೆ ಇಲಾಖೆಯು ಬಳ್ಳಾರಿಯ ಜಿಲ್ಲೆಯ ಅಪ್ರತಿಮ ಸ್ವತಂತ್ರ ಹೋರಾಟಗಾರ, ಗಾಂಧಿವಾದಿ ಹಾಗೂ ಅವಿಭಜಿತ ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಟೇಕೂರ್ ಸುಬ್ರಮಣ್ಯರ ಕುರಿತ ವಿಶೇಷ ಅಂಚೆ ಲಕೋಟೆಯನ್ನು ಮಾ.29ರಂದು ಬೆಳಗ್ಗೆ 10.30 ಕ್ಕೆ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಅಂಚೆ ಅಧೀಕ್ಷಕ ವಿ.ಎಲ್.ಚಿತ್ತಕೋಟೆ ಅವರು ಬಿಡುಗಡೆ ಮಾಡುವರು. ಗಾಂಧಿ ಭವನದ ಕಾರ್ಯದರ್ಶಿ ಟಿ.ಜಿ.ವಿಠಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಹೊನ್ನುರ್ ಅಲಿ, ಮಾಜಿ ವಿಮ್ಸ್ ನಿರ್ದೇಶಕರಾದ ಡಾ.ಟೇಕೂರ್ ರಾಮನಾಥ್ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದು ಬಳ್ಳಾರಿ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ