ಶುಕ್ರವಾರ, ಮಾರ್ಚ್ 24, 2023

ದೈನಂದಿನ ಬಸ್‍ಗಳಲ್ಲಿ ವ್ಯತ್ಯಯ ಮಾ.24, 25ರಂದು* ಬಳ್ಳಾರಿ,ಮಾ.23(ಕರ್ನಾಟಕ ವಾರ್ತೆ): ದಾವಣಗರೆಯಲ್ಲಿ ಮಾ.25 ರಂದು ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸುತ್ತಿದ್ದು, ಬಳ್ಳಾರಿ ವಿಭಾಗದಿಂದ ಒಟ್ಟು 350 ಬಸ್‍ಗಳನ್ನು ಸಾಂಧರ್ಬಿಕ ಒಪ್ಪಂದದ ಮೇಲೆ ಒದಗಿಸಲಾಗುತ್ತಿದೆ. ಆದ್ದರಿಂದ ಮಾ.24 ಮತ್ತು 25 ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡುತಿನಿ, ಕಂಪ್ಲಿ ಮತ್ತು ಸಂಡೂರು ಭಾಗಗಳಿಂದ ವಿವಿಧ ಸ್ಥಳಗಳಿಗೆ ತೆರಳುವ ದೈನಂದಿನ ಬಸ್‍ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿವೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ