ಸೋಮವಾರ, ಆಗಸ್ಟ್ 14, 2023

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಆ.15ರಂದು ಅಮೃತ ಸರೋವರ ಬಳಿ ಹಾರಡಲಿವೆ ತಿರಂಗಾ ಅಮೃತ ಸರೋವರ ಅಂಗಳದಲ್ಲಿ ಧ್ವಜಾರೋಹಣ

ಬಳ್ಳಾರಿ,ಆ.14(ಕರ್ನಾಟಕ ವಾರ್ತೆ): ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪ್ರಸ್ತುತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಪೂರ್ಣಗೊಂಡ ಅಮೃತ ಸರೋವರಗಳಿಗೆ ಸ್ವಾತ್ರಂತ್ರ್ಯೋತ್ಸವದಂದು ಸರೋವರ ಅಂಗಳದಲ್ಲಿ ಧ್ವಜಾರೋಹಣ ನೆರವೇರಿಸಲು ಜಿಲ್ಲಾ ಪಂಚಾಯತಿಯು ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲೆಗೆ 150 ಅಮೃತ ಸರೋವರ ನಿರ್ಮಾಣದ ಗುರಿ ನಿಗದಿಪಡಿಸಲಾಗಿತ್ತು. ಈ ಪೈಕಿ 112 ಅಮೃತ ಸರೋವರಗಳು ಮುಕ್ತಾಯಗೊಂಡಿವೆ. ಉಳಿದ 38 ಮುಕ್ತಾಯ ಹಂತದಲ್ಲಿರುತ್ತದೆ. ಜಿಲ್ಲೆಯ 5 ತಾಲ್ಲೂಕುಗಳ ಮುಕ್ತಾಯಗೊಂಡ ಎಲ್ಲಾ ಅಮೃತ ಸರೋವರಗಳ ಸ್ಥಳಗಳಲ್ಲಿ ಆ.15 ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆ.09 ರಿಂದ ಆ.15 ರ ಅವಧಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ರಡಿಯಲ್ಲಿ “Meri Matti Mera Desh” (ನನ್ನ ಮಣ್ಣು ನನ್ನ ದೇಶ) ಅಭಿಯಾನ ಕೈಗೊಂಡಿದೆ. ಇದರ ಅಂಗವಾಗಿ ಭೂಮಿಯನ್ನು ಹಸೀರಿಕರಣಗೊಳಿಸಲು ಪ್ರತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಗಳಲ್ಲಿ 75 ಸಂಖ್ಯೆ ಸ್ಥಳೀಯ ಜಾತಿಗಳ ಸಸಿಗಳನ್ನು ನೆಟ್ಟು “ಅಮೃತ ವಾಟಿಕ” ವನ್ನು ಅಭಿವೃದ್ಧಿಪಡಿಸುವುದರ ಮೂಲಕ ‘ವಸುಧ ವಂದನ್’ ಕಾರ್ಯಕ್ರಮ ಅಭಿಯಾನ ರೂಪದಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಭೂತಾಯಿಗೆ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರಯೋಧರಿಗೆ ನಮನ ಸಲ್ಲಿಸುವ ಮೂಲಕ ಆಗಸ್ಟ್ 15 ರಂದು ನಿಗದಿತ ಸಮಯದೊಳಗೆ ಪೂರ್ಣಗೊಂಡ ಎಲ್ಲಾ ಅಮೃತ ಸರೋವರ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಾಡಲಿವೆ ಎಂದು ಜಿಪಂ ಸಿಇಒ ರಾಹುಲ್ ಅವರು ತಿಳಿಸಿದ್ದಾರೆ. ಆಯಾ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರು ರಕ್ಷಣಾ ಸಿಬ್ಬಂದಿ ಕೇಂದ್ರ ಸಶಸ್ತ್ರ ಪೆÇೀಲೀಸ್ ಪಡೆ, ರಾಜ್ಯ ಪೆÇೀಲೀಸ್ ಇಲಾಖೆಯಲ್ಲಿ ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೀರರ ಹೆಸರನ್ನು ಶಿಲಾ ಫಲಕದಲ್ಲಿ ಕೆತ್ತನೆ ಮಾಡಿ ಅಮೃತ ಸರೋವರಗಳ ಬಳಿ ಅಳವಡಿಸಲಾಗುತ್ತಿದೆ. ಒಂದು ವೇಳೆ ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವೀರರು ಇರದೇ ಇದ್ದಲ್ಲಿ ದೇಶ ರಕ್ಷಕರ ಸೇವೆಯ ಪ್ರತೀಕವಾಗಿ ಸಾಮಾನ್ಯ ಸಮರ್ಪಣಾ ಶಿಲಾ ಫಲಕ ನಿರ್ಮಿಸಲಾಗುತ್ತಿದೆ. *ವಿನೂತನ ಚಟುವಟಿಕೆಗಳು:* ಕೆರೆಗಳ ಸುತ್ತಾ ತಿರಂಗಾ ಯಾತ್ರೆ, ಸ್ವಚ್ಛಾತಾ ಪ್ರತಿಜ್ಞೆ, ಅರಣ್ಯೀಕರಣ ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅಮೃತ ಸರೋವರ ಬಳಿ ಗ್ರಾಮಸ್ಥರಿಗೆ ಹಾಗೂ ಮಕ್ಕಳಿಗೆ ಚಿತ್ರಕಲೆ ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಇತ್ಯಾದಿ ಸೇರಿದಂತೆ ಸ್ಫಧಾರ್ತಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಅಮೃತ ಸರೋವರದ ಮಾರ್ಗಸೂಚಿಗಳ ಪ್ರಕಾರ ಅತ್ಯುತ್ತಮ ಅಮೃತ ಸರೋವರ ನಿರ್ಮಾಣ ಗುರುತಿಸಿ ಪ್ರಥಮ, ದ್ವೀತಿಯ, ತೃತೀಯ ಪ್ರಶಸ್ತಿಗಳನ್ನು ನೀಡಲು ಜಿಲ್ಲಾಡಳಿತ ತೀರ್ಮಾನಿಸಲಾಗಿದೆ. *ಶಿಲಾ ಫಲಕದ ವಿಶೇಷ:* ಹುತಾತ್ಮರ ಶಿಲಾ ಫಲಕದ ವಿನ್ಯಾಸದಲ್ಲಿ ಮೂರು ಭಾಗಗಳನ್ನಾಗಿ ಮಾಡಲಾಗಿದೆ. ಮೊದಲ ಭಾಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಲಾಂಛನ, ಅದರ ಕೆಳಗಡೆ ಗ್ರಾಮ ಪಂಚಾಯತಿ ಹೆಸರು, ಇಲ್ಲವೆ ಸ್ಥಳದ ಹೆಸರು, ದಿನಾಂಕ ನಮೂದಿಸಲಾಗುತ್ತಿದೆ. ಫಲಕದ ಮಧ್ಯೆ “ಮಾತೃ ಭೂಮಿಗಾಗಿ ಪ್ರತಿದಿನ, ಪ್ರತಿ ಕ್ಷಣ, ಜೀವನದ ಪ್ರತಿ ಕ್ಷಣವೂ ಬದುಕುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಅರ್ಪಿಸುವ ನಿಜವಾದ ಗೌರವ-ಪ್ರಧಾನ ಮಂತ್ರಿಗಳು” ಎಂಬ ಉಕ್ತಿ ಬರೆಯಿಸಲಾಗುತ್ತಿದೆ. ಮೂರನೇ ಭಾಗದಲ್ಲಿ ಸ್ಥಳೀಯ ವೀರರ ಹೆಸರು ಬರೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ