ಗುರುವಾರ, ಆಗಸ್ಟ್ 10, 2023

ಜವಾಹರ ನವೋದಯ ವಿದ್ಯಾಲಯ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಅವಧಿ ವಿಸ್ತರಣೆ

ಬಳ್ಳಾರಿ,ಆ.10(ಕರ್ನಾಟಕ ವಾರ್ತೆ): ಜವಾಹರ ನವೋದಯ ವಿದ್ಯಾಲಯಗಳಿಗೆ 2024-25 ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಈಗಾಗಲೇ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 17 ರಂದು ಕೊನೆಯ ದಿನವಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜವಾಹರ್ ನವೋದಯ ವಿದ್ಯಾಲಯದ ಅಧೀಕೃತ ವೆಬ್‍ಸೈಟ್ www.navodaya.gov.in ಗೆ ಭೇಟಿ ನೀಡಬೇಕು. 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2024 ರ ಜನವರಿ 20 ರಂದು ಆಯ್ಕೆ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ನವೋದಯ ವಿದ್ಯಾಲಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ