ಗುರುವಾರ, ಆಗಸ್ಟ್ 10, 2023

ಸಿರಿವಾರ ಗ್ರಾಮದಲ್ಲಿ ವಸುಧ ವನ ಕಾರ್ಯಕ್ರಮ

ಬಳ್ಳಾರಿ,ಆ.10(ಕರ್ನಾಟಕ ವಾರ್ತೆ): ಸಿರಿವಾರ ಗ್ರಾಮ ಪಂಚಾಯತಿಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವದಡಿಯಲ್ಲಿ ಬುಧವಾರದಂದು ವಸುಧ ವಂದನ್ ಕಾರ್ಯಕ್ರಮದಡಿ “ವಸುಧ ವನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ-1 ಪ್ರಮೋದ್ ಅವರು ಸಸಿ ನೆಟ್ಟು ನೀರೇರೆಯುವ ಮೂಲಕ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ, ತಾಲೂಕು ವೈದ್ಯಾಧಿಕಾರಿಗಳು, ಪಿಡಿಓ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಂಡದವರು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಮತ್ತು ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ