ಗುರುವಾರ, ಆಗಸ್ಟ್ 3, 2023
ಮರು ವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ನೊಂದಣಿಗೆ ಅವಧಿ ವಿಸ್ತರಣೆ
ಬಳ್ಳಾರಿ,ಆ.03(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮು ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ(ಖWಃಅIS)ಗೆ ನೊಂದಣಿಗೆ ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೊಂದಾಯಿಸಿಕೊಳ್ಳಲು ನಿಗದಿಪಡಿಸಿದ ಅವಧಿ ವಿಸ್ತರಿಸಲಾಗಿದೆ ಎಂದು ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೇಶ್ವರ್.ಹೆಚ್.ಕೆ ಅವರು ತಿಳಿಸಿದ್ದಾರೆ.
ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ ಬೆಳೆಗಳಾಗಿವೆ.
*ಹಸಿ ಮೆಣಸಿನಕಾಯಿ:* ಬಳ್ಳಾರಿ, ಕುರುಗೋಡು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.71 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.3550 ಆಗಿರುತ್ತದೆ.
*ದಾಳಿಂಬೆ:* ಬಳ್ಳಾರಿ, ಕುರುಗೋಡು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 1 ಲಕ್ಷ 27 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.6350 ಆಗಿರುತ್ತದೆ.
ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೊಂದಾಯಿಸಿಕೊಳ್ಳಲು ಆಗಸ್ಟ್ 7 ರಂದು ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ: 08392-278177 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ