ಸೋಮವಾರ, ಆಗಸ್ಟ್ 14, 2023
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಪ್ರವಾಸ ಕಾರ್ಯಕ್ರಮ
ಬಳ್ಳಾರಿ,ಆ.14(ಕರ್ನಾಟಕ ವಾರ್ತೆ):
ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಆ.15 ಮತ್ತು 16 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ಆ.15 ರಂದು ಬೆಳಿಗ್ಗೆ 7.15 ಕ್ಕೆ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಲಿದ್ದು, 7.30 ಕ್ಕೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣಾ ನೆರವೇರಿಸುವರು.
ಬೆಳಿಗ್ಗೆ 8 ಕ್ಕೆ ನಗರದ ರಾಜ್‍ಕುಮಾರ್ ಉದ್ಯಾನವನದ ಗಾಂಧೀಜಿ ಅವರ ಪ್ರತಿಮೆಗೆ ಗೌರವ ಸಮರ್ಪಣೆ ಮಾಡುವರು. ನಂತರ ಬೆಳಿಗ್ಗೆ 8.15 ಕ್ಕೆ ಮೋತಿ ವೃತ್ತದ ಬಳಿಯ 150 ಅಡಿ ಎತ್ತರದ ರಾಷ್ಟ್ರ ಧ್ವಜಾರೋಹಣಾ ನೆರವೇರಿಸುವರು. ಬಳಿಕ 8.30 ಕ್ಕೆ ವಿಮ್ಸ್/ಎನ್‍ಸಿಸಿ ಮೈದಾನದಲ್ಲಿ ಪಥ ಸಂಚಲನ ಮತ್ತು ಕವಾಯತ್ ತಂಡಗಳ ವೀಕ್ಷಣೆ ಮಾಡುವರು. ನಂತರದಲ್ಲಿ ಬೆಳಿಗ್ಗೆ 8.45 ಕ್ಕೆ ವಿಮ್ಸ್ ವೈದ್ಯಕೀಯ ಕಾಲೇಜಿನ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಗೌರವ ಸಮರ್ಪಣೆ ಮಾಡುವರು. ಬೆಳಿಗ್ಗೆ 9 ಕ್ಕೆ ವಿಮ್ಸ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸುವರು. ನಂತರ 9.05 ಕ್ಕೆ ಪರೇಡ್ ವೀಕ್ಷಣೆ, 9.20 ಕ್ಕೆ ಗೌರವ ಸ್ವೀಕಾರ ಮತ್ತು ಪಥ ಸಂಚಲನ, 9.40 ಕ್ಕೆ ಸಚಿವರಿಂದ ಸ್ವಾತಂತ್ರ್ಯೋತ್ವದ ಸಂದೇಶ, 9.55 ಕ್ಕೆ ರಾಜ್ಯ, ರಾಷ್ಟ್ರ ಹಾಗೂ ಅಂರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12.30 ಕ್ಕೆ ನೂತನ ಎಪಿಎಂಸಿ ಪೊಲೀಸ್ ಠಾಣೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗುವರು. ನಂತರ ಮಧ್ಯಾಹ್ನ 03 ಕ್ಕೆ ನಗರದ ಬಾಲಾಜಿರಾವ್ ರಸ್ತೆಯ ಬಾಲಾಜಿ ಭವನದಲ್ಲಿ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಹಾಗೂ ಬಳ್ಳಾರಿ ಚೇಂಬರ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಇವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ರಿಂದ 6 ರವರೆಗೆ ಸಾರ್ವಜನಿಕರ ಭೇಟಿ ನಡೆಸಿ, ವಾಸ್ತವ್ಯ ಮಾಡುವರು.
ಆ.16 ರಂದು ಬೆಳಿಗ್ಗೆ 11.30 ಕ್ಕೆ ಟಿ.ಬಿ.ಪಿ.ಯ ಮುನಿರಾಬಾದ್‍ನ ಕಾಡಾ ದಲ್ಲಿ ತುಂಗಾಭದ್ರಾ ಯೋಜನೆ ಹಾಗೂ ಕಾಲುವೆಗಳ 119 ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 3.30 ಕ್ಕೆ ಮುನಿರಾಬಾದ್ ರಸ್ತೆ ಮಾರ್ಗವಾಗಿ ಕೂಡ್ಲಿಗಿ, ಚಿತ್ರದುರ್ಗ ಹಾಗೂ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ