ಗುರುವಾರ, ನವೆಂಬರ್ 9, 2023
ನ.10 ಮತ್ತು 11 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ನ.09(ಕರ್ನಾಟಕ ವಾರ್ತೆ):
ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಗೆ ಬರುವ 110/11ಕೆವಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಇನ್‍ಫ್ಯಾಂಟ್ರಿ ರಸ್ತೆಯಲ್ಲಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.10 ಮತ್ತು 11 ರಂದು ಎರಡು ದಿನಗಳ ಕಾಲ ಬೆಳಿಗ್ಗೆ 09 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*ನ.10ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-33 ಫೀಡರ್ ವ್ಯಾಪ್ತಿಯ ಕೆ.ಹೆಚ್.ಬಿ.ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್‍ಫೆಂಟರಿ ರಸ್ತೆ, ವಾಸವಿ ಶಾಲೆ, ಕೊಳಗಲ್ ರಸ್ತೆ, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರೋಡ್, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ದಾರ್ಥ ನಗರ, ವಿಯಾನಿ ಶಾಲೆ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ನ.11ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-7 ಫೀಡರ್‍ನ ಸಂಗನಕಲ್ಲು ರಸ್ತೆ, ಎಸ್.ಎನ್.ಪೇಟ್ 3ನೇ ಕ್ರಾಸ್, ಜಿಲ್ಲಾ ಆಸ್ಪತ್ರೆ, ರಾಘವ ಕಲಾಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌಂಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ.ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಆಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮಕಟ್ಟೆ.
ಎಫ್-9 ಫೀಡರ್‍ನ ನೆಹರು ಕಾಲೋನಿ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಎಸ್.ಎನ್.ಪೇಟೆ 6ನೇ, 5ನೇ ಮತ್ತು 4ನೇ, 3ನೇ ಅಡ್ಡರಸ್ತೆ, ಡಿಅರ್ ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಚಾಲಂ ಕಾಂಪೌಂಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲೂಕು ಕಚೇರಿ, ಡಿಸಿ ಕಚೇರಿ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ