ಗುರುವಾರ, ನವೆಂಬರ್ 9, 2023

ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ; ನಿಧಿ ಅಪ್ಕೆ ನಿಕಟ್ ಕಾರ್ಯಕ್ರಮ ನ.28ರಂದು

ಬಳ್ಳಾರಿ,ನ.09(ಕರ್ನಾಟಕ ವಾರ್ತೆ): ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಜಿಲ್ಲಾ ಪ್ರಾದೇಶಿಕ ಕಚೇರಿಯ ಉದ್ಯೋಗಿಗಳ ಭವಿಷ್ಯನಿಧಿ ಮತ್ತು ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ನಿವಾರಿಸಲು ನ.28ರಂದು ಬೆಳಿಗ್ಗೆ 9ರಿಂದ ಸಂಜೆ 6 ರವರೆಗೆ ‘ನಿಧಿ ಆಪ್ಕೆ ನಿಕಟ್' ಕಾರ್ಯಕ್ರಮವನ್ನು ಕುಡುತಿನಿಯ ಬಿಟಿಪಿಎಸ್ ಮೀಟಿಂಗ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಯ ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಉದ್ಯೋಗದಾತರ ಕರ್ತವ್ಯಗಳು, ಜವಾಬ್ದಾರಿಗಳ ಅರಿವು, ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ಆನ್‍ಲೈನ್ ಸೇವೆಗಳ ಮಾಹಿತಿ, ಹೊಸ ಉಪಕ್ರಮಗಳು ಹಾಗೂ ಸುಧಾರಣೆಗಳ ಮಾಹಿತಿ ಒದಗಿಸುವುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ:08392-226304 ಗೆ ಸಂಪರ್ಕಿಸಬಹುದು ಎಂದು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ