ಶುಕ್ರವಾರ, ನವೆಂಬರ್ 10, 2023
ಅಪರಿಚಿತ ಮೃತ ವ್ಯಕ್ತಿಯ ಶವ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ, ನ.10 (ಕರ್ನಾಟಕ ವಾರ್ತೆ):
ಬಳ್ಳಾರಿ ರೈಲು ನಿಲ್ದಾಣದ ವೇದಿಕೆ ನಂ.3ಕ್ಕೆ ಅಂಟಿಕೊಂಡಿರುವ ರೋಡ್ ನಂ.05ರ ಮಧ್ಯದ ರೈಲುಹಳಿಯಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯ ನ.08 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಎತ್ತರ 5.4 ಅಡಿ, ಸಾಧರಣ ಮೈಕಟ್ಟು, ಸಾಧರಣ ಮೈಬಣ್ಣ, ದಪ್ಪ ಮೂಗು, ದಪ್ಪ ತುಟಿ, ತಲೆಯಲ್ಲಿ ಸುಮಾರು 2 ರಿಂದ 3 ಇಂಚು ಉದ್ದದ ಕಪ್ಪು ಕೂದಲು ಹಾಗೂ ಅರ್ದ ಇಂಚು ಕಪ್ಪು ಗಡ್ಡ ಮತ್ತು ಕಪ್ಪು ಮೀಸೆ ಬಿಟ್ಟಿರುತ್ತಾನೆ.
ಮೃತನ ಮೈ ಮೇಲಿನ ಬಟ್ಟೆಗಳು: ಕೇಸರಿ ಬಣ್ಣದ ತುಂಬು ತೋಳಿನ ಅಂಗಿ, ಚಾಕಲೇಟ್ ಬಣ್ಣದ ಹೂವಿನ ಡಿಜೈನ್ ಉಳ್ಳ ಲುಂಗಿ ದರಿಸಿರುತ್ತಾನೆ. ಕೆಂಪು ಬಣ್ಣದ ಎರಡೇಳೆಯ ಉಡದಾರ, ಬಿಳಿಯ ಬಣ್ಣದ ತುಂಡಾದ ಆಫ್ ಬನಿಯನ್, ಬಲಗೈ ಮುಂಗೈಯಿಗೆ ಹಳಿದಿ ಬಣ್ಣದ ದರವನ್ನು ಕಟ್ಟಿರುತ್ತಾನೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಉಪ ನಿರೀಕ್ಷಕರು ಮೊ.9480802131, ಪೆÇಲೀಸ್ ವೃತ್ತ ರಾಯಚೂರು ಮೊ.9480800471ಗೆ ಸಂಪರ್ಕಿಸಬಹುದು ಎಂದು ರೈಲ್ವೇ ಠಾಣೆಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ