ಶುಕ್ರವಾರ, ನವೆಂಬರ್ 10, 2023
ಬಳ್ಳಾರಿ ಗ್ರಾಮೀಣ ವಿದ್ಯುತ್ ವ್ಯತ್ಯಯ ನ.12ರಂದು
ಬಳ್ಳಾರಿ,ನ.10(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಗೆ ಬರುವ 220/110/11 ಕೆವಿ ಅಲ್ಲೀಪುರ-ಉತ್ತರ ಮಾರ್ಗದ ಇನ್ಸುಲೇಟರ್ ಬದಲಾವಣೆ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.12 ರಂದು ಬೆಳಿಗ್ಗೆ 09 ರಿಂದ ಮಧ್ಯಾಹ್ನ 01 ಗಂಟೆ ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-1 ಎನ್.ಜೆ.ವೈ ಬಾಲಾಜಿ ನಗರ್ ಕ್ಯಾಂಪ್ ವ್ಯಾಪ್ತಿಯ ಕೊರ್ಲಗುಂದಿ ವಿಜಯನಗರ ಕ್ಯಾಂಪ್ ಜಾಲಿಬೆಂಜಿ, ಬಲಾಜಿನರಗ ಕ್ಯಾಂಪ್, ಜ್ಯಾಲಿಬೆಂಜಿ.
ಎಫ್-2 ಐ.ಪಿ ಸೆಟ್ ಫೀಡರ್ ಸೋಮಸಮುದ್ರ ವ್ಯಾಪ್ತಿಯ ಸೋಮಸಮುದ್ರ ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೂಳೂರು, ಮಧುರೆ, ಕೊಳಗಲ್ಲು ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್, ಮುಂತಾದ ಗ್ರಾಮಗಳು.
ಎಫ್-3 ಶ್ರೀಧರಗಡ್ಡೆ ಎನ್.ಜೆ.ವೈ ಫೀಡರ್ ವ್ಯಾಪ್ತಿಯ ಸೋಮಸಮುದ್ರ ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೂಳೂರು, ಮಧುರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್/ಗ್ರಾಮಗಳು. ಕೂಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್ ವಿ.ಟಿ.ಕ್ಯಾಂಪ್.
ಎಫ್-4 ಐ.ಪಿ ಸೆಟ್ ಕೊರ್ಲಗುಂದಿ ಫೀಡರ್ ವ್ಯಾಪ್ತಿಯ ಕೊರ್ಲಗುಂದಿ ಬಾಲಾಜಿನಗರ್ ಕ್ಯಾಂಪ್ ಜ್ಯಾಲಿಬೆಂಜಿ, ಶ್ರೀಧರಗಡ್ಡ, ವಿಜಯನಗರ ಕ್ಯಾಂಪ್.
ಎಫ್-5 ಡಾಕ್ಟರ್ ಕ್ಯಾಂಪ್ ವ್ಯಾಪ್ತಿಯ ಶ್ರೀಧರಗಡ್ಡೆ, ಗುಡಾರ್.
ನಗರ 110ಕೆ.ವಿ ಎ.ಸಿ.ಸಿ ಕಾರ್ಖಾನೆ ವಿದ್ಯುತ್ ಮಾರ್ಗ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ