ಶುಕ್ರವಾರ, ನವೆಂಬರ್ 10, 2023

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ಬಳ್ಳ್ಳಾರಿ,ನ.10(ಕರ್ನಾಟಕ ವಾರ್ತೆ): ಸಂಡೂರು ತಾಲೂಕಿನ 2ನೇ ವಾರ್ಡ್ ಐಡಿಬಿಐ ಬ್ಯಾಂಕ್ ಹಿಂಭಾಗ, ವೀರೇಶ ಜನರಲ್ ಸ್ಟೋರ್ ಹತ್ತಿರ ನಿವಾಸಿ ಆನಂದ.ಜೆ ಎನ್ನುವ 40 ವರ್ಷದ ವ್ಯಕ್ತಿಯು ಅ.29 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಹರೆ: ಎತ್ತರ 5.2 ಅಡಿ, ಸಾಧರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಅಗಲವಾದ ಕಿವಿ ಹೊಂದಿದ್ದು, ಮುಂದೆಲೆಯಲ್ಲಿ ಕೂದಲು ಉದರಿದ್ದು, ಹಗಲವಾದ ಹಣೆ ಇದೆ. ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೆÇಲೀಸ್ ಠಾಣೆಯ ಮೊ.9480803061 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258102 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ