ಗುರುವಾರ, ಅಕ್ಟೋಬರ್ 12, 2023

ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ದಸರ ಉತ್ಸವ ಅ.14ರಿಂದ

ಬಳ್ಳಾರಿ,ಅ.12(ಕರ್ನಾಟಕ ವಾರ್ತೆ): ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ದಸರ ಉತ್ಸವ ಅಂಗವಾಗಿ ಅ.14ರಿಂದ 25ರವರೆಗೆ ಪುರಾಣ-ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ತಿಳಿಸಿದ್ದಾರೆ. ದಸರ ಉತ್ಸವದ ಅಂಗವಾಗಿ ಮಹಿಳೆಯರು ಮತ್ತು ಭಕ್ತರು ಬೆಳಿಗ್ಗೆ 03ರಿಂದ ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಮಧ್ಯಾಹ್ನ 04ರಿಂದ 05ರವರೆಗೆ ಲಲಿತ ಸಹಸ್ರ ನಾಮವಳಿ ಪಾರಾಯಣ, ಸಂಜೆ 05.30ರಿಂದ 06.30 ರವರೆಗೆ ದೇವಿ ಪುರಾಣ ಪ್ರವಚನ, ರಾತ್ರಿ 07ರಿಂದ 09.30ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 09.30ರಿಂದ ಬೆಳಿಗ್ಗೆ 05ರವರೆಗೆ ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಅ.24ರಂದು ಸಂಜೆ 06 ಕ್ಕೆ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕೋರಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ