ಬುಧವಾರ, ಅಕ್ಟೋಬರ್ 11, 2023

ವ್ಯಕ್ತಿ ಕಾಣೆ; ಪ್ರಕರಣ ದಾಖಲು

ಬಳ್ಳಾರಿ,ಅ.11(ಕರ್ನಾಟಕ ವಾರ್ತೆ): ಇಲ್ಲಿನ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಸುರೇಶ್ ಬಾಬು ಎನ್ನುವ 42 ವರ್ಷದ ವ್ಯಕ್ತಿಯು ಅ.07ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು. ಚಹರೆ ಗುರುತು: 5.5 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು ಹೊಂದಿದ್ದು, ತೆಲುಗು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಕ್ರೀಮ್ ಬಣ್ಣದ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತಾನೆ. ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಠಾಣೆಯ ಪಿಎಐ ಮೊ.9480803082 ಹಾಗೂ ಪಿಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ